ಕೋಟ, ನ.20 (DaijiworldNews/PY): ಸರಕಾರ ನಾನಾ ಯೋಜನೆಗಳು ಜನಸಾಮಾನ್ಯರ ತಲುಪುವಲ್ಲಿ ಅಥವಾ ಮಾಹಿತಿ ನೀಡುವಲ್ಲಿ ಹೆಚ್ಚಿನ ಇಲಾಖೆಗಳು ನಿರ್ಲಕ್ಷ್ಯ ವಹಿಸುವುದನ್ನು ನಾವುಗಳು ಕಾಣುತ್ತಿದ್ದೇವೆ. ಅದರಲ್ಲಿ ಒಂದು ಹೆಜ್ಜೆ ಮುಂದಿರಿಸಿದ ಕಂದಾಯ ಇಲಾಖೆ ಕಳೆದ ಬಾರಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ಯೋಜನೆಯನ್ನು ಬಡ ಕುಟುಂಬಗಳ ಮನೆಗೆ ತೆರಳಿ ಯೋಜನೆಯನ್ನು ಫಲಾನುಭಿಗಳಾಗಿಸಿದ್ದಾರೆ.






ಆದರೆ, ಅದೇ ಇಲಾಖೆ ಇದೀಗ ಸರಕಾರದ ವಿನೂತ ಮಾದರಿ ಯೋಜನೆಯನ್ನು ಸಿದ್ಧಪಡಿಸಿ ಬ್ರಹ್ಮಾವರದ ತಹಶಿಲ್ದಾರ್ ಕಿರಣ್ ಗೌರಯ್ಯ ನಿರ್ದೇಶನದಡಿ ಬಡ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ಕೋಟ ಹೋಬಳಿ ಪ್ರದೇಶದ ಗಿಳಿಯಾರು, ಮಣೂರು ಮತ್ತು ಕೋಟತಟ್ಟು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪೌತಿ ಅಧಾಲತ್ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನಸಾಮಾನ್ಯರ ಪ್ರಶಂಸೆಗೆ ಪಾತ್ರವಾಗಿದೆ.
ಶುಕ್ರವಾರ ಕೋಟ ಹಾಗೂ ಕೋಟತಟ್ಟು, ಶಿರಿಯಾರ ಸೇರಿದಂತೆ ಇನ್ನಿತರ ಗ್ರಾಮಪಂಚಾಯತ್ ವ್ಯಾಪ್ತಿಗೆ ತೆರಳಿ ಪೌತಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಕೋಟತಟ್ಟು ಪರಿಸರದ ಮಲ್ಲಿಕಾ, "ನಮ್ಮ ತಂದೆಯವರ ಹೆಸರಿನಲ್ಲಿ ಉಳಿದುಕೊಂಡ ಸ್ಥಳವನ್ನು ಖಾತೆ ಬದಲಾವಣೆ ಮಾಡುವ ಬಗ್ಗೆ ಯಾವುದೇ ಮಾಹಿತಿ ನಮಗಿರಲ್ಲಿಲ್ಲ ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಮಾಡಿಕೊಡುವ ಈ ಯೋಜನೆ ಬಡವರ ಕಣ್ಣಿರು ಒರೆಸುವ ಒಂದು ವಿನೂತ ಯೋಜನೆಯಾಗಿದೆ. ಈ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೋಟ ನಾಡಕಛೇರಿಯ ಉಪತಹಶೀಲ್ದಾರ್ ವಸಂತ, ಕೋಟ ಕಂದಾಯ ಅಧಿಕಾರಿ ರಾಜು, ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಸಹಾಯಕ ರಾಜು ಮರಕಾಲ, ಕೋಟ ಗ್ರಾಮಪಂಚಾಯತ್ ಮಾಜಿ ಸದಸ್ಯ ಸಂತೋಷ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.