ಮಂಗಳೂರು, ನ. 20 (DaijiworldNews/SM): ಟು ವೀಲರ್ನ ಸೀಟಿನ ಅಡಿಯಲ್ಲಿ ಮೊಬೈಲ್, ಪರ್ಸ್ ಇಟ್ಟು ಹೋಗುವ ಅಭ್ಯಾಸ ನಿಮಗಿದ್ದಲ್ಲಿ ನೀವು ಈ ವರದಿಯನ್ನು ತಪ್ಪದೆ ಓದಲೇ ಬೇಕು.

ಇನ್ಮುಂದೆ ಹೀಗೆ ಮೊಬೈಲ್ ಪರ್ಸ್ ಇಟ್ಟು ಹೋಗುವವರು ತುಸು ಎಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯವಾಗಿದೆ. ಮೊಬೈಲ್, ಪರ್ಸನ್ನು ದ್ವಿಚಕ್ರ ವಾಹನದ ಸೀಟಿನಡಿಯಲ್ಲಿಟ್ಟು ವಾಕಿಂಗ್ ಗೆ ತೆರಳುವ ಸಂದರ್ಭವನ್ನೇ ಕೆಲವು ಖದೀಮರು ಕಾಯುತ್ತಿರುತ್ತಾರೆ. ಅದರಲ್ಲೂ ಮಂಗಳೂರಿನ ಕದ್ರಿ ಪಾರ್ಕ್ಗೆ ವ್ಯಾಯಾಮಕ್ಕೆ ತೆರಳುವವರು ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ.
ನಗರದಲ್ಲಿ ಟು ವೀಲರ್ ಗಳನ್ನೇ ಟಾರ್ಗೆಟ್ ಮಾಡಿ ಪರ್ಸ್, ಮೊಬೈಲ್ ಕದಿಯುವ ತಂಡವೊಂದು ಸಕ್ರಿಯವಾಗಿದೆ. ಕದ್ರಿ ಪಾರ್ಕ್ ಬಳಿ ಈ ತಂಡ ಸದ್ದಿಲ್ಲದೆ ಕೈಚಳಕ ತೋರುತ್ತಿದೆ. ಈ ಬಗ್ಗೆ ಪರ್ಸ್ ಕಳ್ಳತನಕ್ಕೊಳಗಾದ ವ್ಯಕ್ತಿಯೊಬ್ಬರು ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ. ಉನ್ನತ್ ಪೂಜಾರಿ ಎಂಬವರು ಮೋಸ ಹೋಗಿದ್ದು, ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.
ಉನ್ನತ್ ಪೂಜಾರಿ ಪ್ರತೀದಿನ ಕದ್ರಿ ಪಾರ್ಕ್ಗೆ ವಾಕಿಂಗ್ ತೆರಳುತ್ತಾರೆ. ತನ್ನ ಆಕ್ಸೆಸ್ ದ್ವಿಚಕ್ರವಾಹನ ಪಾರ್ಕ್ ಮಾಡಿ ಪರ್ಸ್ ಸೀಟ್ ಅಡಿಯಲ್ಲಿ ಇರಿಸಿ ತೆರಳುತ್ತಾರೆ. ಆದರೆ, ಖಾದೀಮರು ಉನ್ನತ್ ಅವರ ಗಾಡಿಯಿಂದ ನಗದು ದೋಚಿದ್ದಾರೆ. ನವೆಂಬರ್ ೧೮ ರಂದು ೪ ಸಾವಿರ ಹಣ ದೋಚಿದ್ದಾರೆ. ನವೆಂಬರ್ 19 ರಂದು 1500 ಹಣ ದೋಚಿದ್ದಾರೆ.
ಟು ವೀಲರ್ನ ಸೀಟ್ ಲಾಕ್ ಓಪನ್ ಮಾಡಿ ಹಣ ಕಳವು ಮಾಡಲಾಗಿದೆ. ಆದರೆ, ಆರಂಭದಲ್ಲಿ ಈ ವಿಚಾರ ಅವರ ಗಮನಕ್ಕೆ ಬಂದಿಲ್ಲ. ಎರಡು ಬಾರಿ ಹಣ ಕಳೆದುಕೊಂಡ ಬಳಿಕ ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ.