ಮಂಗಳೂರು, ಸೆ25: ಬೊಳ್ಳಿ ಮೂವೀಸ್ ಲಾಂಛನದಲ್ಲಿ ನಿರ್ಮಾಣಗೊಂಡ ಅರೆ ಮರ್ಲೆರ್ ಸಿನಿಮಾ ಥಿಯೇಟರನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ, ಪ್ರಭಾತ್ ಟಾಕೀಸ್ ನಿಂದ ಚಿತ್ರವನ್ನು ಎತ್ತಂಗಡಿ ಮಾಡುವುದಕ್ಕೆ ವಿರೋಧಿಸಿ ಸೋಮವಾರ ತುಳು ಚಲನಚಿತ್ರ ನಿರ್ಮಾಪಕರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಯಿತು.
ದೇವದಾಸ್ ಕಾಪಿಕಾಡ್ ನಿರ್ದೇಶನ ಅರೆ ಮರ್ಲೆರ್ ಸಿನಿಮಾ ಉತ್ತಮ ಪ್ರದರ್ಶನ ಯಶಸ್ವಿ 7 ನೇ ವಾರದತ್ತ ಮುನ್ನಡೆಯುತ್ತಿದ್ದರೂ ಇದೀಗ ತೆಲುಗು ಸಿನಿಮಾ ಅವಕಾಶ ಕಲ್ಪಿಸಿಕೊಟ್ಟಿದ್ದನ್ನು ವಿರೋಧಿಸಿ ಪ್ರಭಾತ್ ಟಾಕೀಸ್ ಮುಂದೆ ಸೇರಿದ್ದ ತುಳು ನಿರ್ಮಾಪಕರು ಥಿಯೇಟರ್ ವಿರುದ್ದ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ವಿಜಯ್ ಕುಮಾರ್ ಕೋಡಿಯಲ್ ಬೈಲ್, ಪ್ರಕಾಶ್ ಪಾಂಡೇಶ್ವರ, ದೇವದಾಸ್ ಕಾಪಿಕಾಡ್, ರಾಜೇಶ್ ಬ್ರಹ್ಮಾವರ್, ಕಿಶೋರ್ ಡಿ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.ಕೊನೆಗೂ ತುಳು ಚಿತ್ರ ಪ್ರದರ್ಶನಕ್ಕೆ ಟಾಕೀಸ್ ಮಾಲೀಕರು ಒಪ್ಪಿಕೊಂಡಿದ್ದಾರೆ