ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾಗಿದೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಂಪುಟ ಇಂದಿನಿಂದ ಅಸ್ತಿತ್ವಕ್ಕೆ ಬಂದಿದೆ. ಮಧ್ಯಾಹ್ನ 2.12ಕ್ಕೆ ಕನ್ಯಾ ಲಗ್ನದಲ್ಲಿ ನೂತನ ಸಚಿವರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜೆಡಿಎಸ್ನ 8 ಶಾಸಕರಿಗೆ ಮಂತ್ರಿ ಪಟ್ಟ ಒಲಿದಿದ್ದರೆ, ಕಾಂಗ್ರೆಸ್ 15 ಶಾಸಕರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ.ನೂತನ ಸಚಿವರಿಗೆ ರಾಜ್ಯಪಾಲ ವಜೂಭಾಯ್ ವಾಲಾ ಪ್ರಮಾಣ ಮತ್ತು ಗೌಪತ್ಯೆ ಬೋಧಿಸಿದ್ದಾರೆ.
ಎಲ್ಲಾ ಸಚಿವರುಗಳು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ , ಕಾಂಗ್ರೆಸ್ ಜಮೀರ್ ಅಹ್ಮದ್ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ
ಸಂಪುಟ ಸಚಿವರ ವಿವರ ಇಂತಿದೆ
ಎಚ್ ಡಿ ರೇವಣ್ಣ -ಜೆಡಿಎಸ್
ಆರ್ ವಿ ದೇಶಪಾಂಡೆ -ಕಾಂಗ್ರೆಸ್
ಬಂಡೆಪ್ಪ ಕಾಶೆಂಪೂರ -ಜೆಡಿಎಸ್
ಡಿ. ಕೆ ಶಿವಕುಮಾರ್ -ಕಾಂಗ್ರೆಸ್
ಜಿ.ಟಿ ದೇವೇಗೌಡ -ಜೆಡಿಎಸ್
ಕೆ. ಜೆ ಜಾರ್ಜ್ -ಕಾಂಗ್ರೆಸ್
ಡಿ.ಸಿ ತಮ್ಮಣ್ಣ -ಜೆಡಿಎಸ್
ಕೃಷ್ಣಬೈರೇಗೌಡ -ಕಾಂಗ್ರೆಸ್
ಎಂ. ಸಿ ಮನಗೂಳಿ -ಜೆಡಿಎಸ್
ಎಂಎಸ್ ಶಿವಶಂಕರ ರೆಡ್ಡಿ -ಕಾಂಗ್ರೆಸ್
ಎಸ್ ಆರ್ ಶ್ರೀನಿವಾಸ್ -ಕಾಂಗ್ರೆಸ್
ರಮೇಶ್ ಜಾರಕಿಹೊಳಿ -ಕಾಂಗ್ರೆಸ್
ವೆಂಕಟರಾವ್ ನಾಡಗೌಡ -ಜೆಡಿಎಸ್
ಪ್ರಿಯಾಂಕ್ ಖರ್ಗೆ -ಕಾಂಗ್ರೆಸ್
ಸಿ.ಎಸ್ ಪುಟ್ಟರಾಜು -ಜೆಡಿಎಸ್
ಯು.ಟಿ ಅಬ್ದುಲ್ ಖಾದರ್ -ಕಾಂಗ್ರೆಸ್
ಸಾ.ರ. ಮಹೇಶ್ -ಕಾಂಗ್ರೆಸ್
ಜಮೀರ್ ಅಹ್ಮದ್ ಖಾನ್ ಜೆಡಿಎಸ್
ಎನ್ ಮಹೇಶ್ -ಬಿಎಸ್ ಪಿ
ಶಿವಾನಂದ ಪಾಟೀಲ್ -ಕಾಂಗ್ರೆಸ್
ವೆಂಕಟರಮಣಪ್ಪ -ಕಾಂಗ್ರೆಸ್
ರಾಜಶೇಖರ ಪಾಟೀಲ -ಕಾಂಗ್ರೆಸ್
ಪುಟ್ಟರಂಗಶೆಟ್ಟಿ -ಕಾಂಗ್ರೆಸ್
ಆರ್ ಶಂಕರ್ ಪಕ್ಷೇತರ -ಕೆಪಿಜೆಪಿ
ಡಾ. ಜಯಮಾಲಾ ರಾಮಚಂದ್ರ -ಕಾಂಗ್ರೆಸ್