ಕಡಬ, ನ.21 (DaijiworldNews/HR): ಕೊರೊನಾ ಕಾರಣದಿಂದ ದೂರದ ದೇಶದಲ್ಲಿ ಮತ್ತು ನಗರದಲ್ಲಿ ದುಡಿಯುತ್ತಿದ್ದ ಯುವಕರು ತಮ್ಮ ಹಳ್ಳಿಗಳಿಗೆ ಮರಳಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳನ್ನು ಕೈಗೊಂಡು ಜೀವನ ಸಾಗಿಸುತ್ತಿದ್ದಾರೆ.

ಕೊರೊನಾ ಕಾರಣದಿಂದ ಕಡಬ ತಾಲ್ಲೂಕಿನ ಹೊಸ್ಮತ್ನ ಯುವಕನೊಬ್ಬ ವಿದೇಶದಲ್ಲಿ ಕೆಲಸ ಬಿಟ್ಟು. ಕಡಬದ ಸಿಟಿಯಲ್ಲಿ ಚಹಾ ಮಾರುವ ಮೂಲಕ ಕೆಲಸ ಕಂಡುಕೊಂಡಿದ್ದಾರೆ. ಹೊಸ್ಮತ್ ಕಕ್ಕೆನಡ್ಕ ದಯಾನಂದ ಗೌಡರ ಪುತ್ರ ಶಿವಪ್ರಸಾದ್ ಗೌಡ ವಿದೇಶದಿಂದ ಮನೆಗೆ ಮರಳಿದ್ದು, ಚಹಾ ಮತ್ತು ತಿಂಡಿಗಳನ್ನು ಬೆಳಿಗ್ಗೆ ಮತ್ತು ಸಂಜೆ ಅಂಗಡಿಗಳು ಮತ್ತು ಕಚೇರಿಗಳಿಗೆ ಭೇಟಿ ನೀಡಿ ಮಾರಟ ಮಾಡುತ್ತಾರೆ. ಶಿವಪ್ರಸಾದ್ ಅವರು ಬೆಳಿಗ್ಗೆ 10.30 ಕ್ಕೆ ಮತ್ತು ಮಧ್ಯಾಹ್ನ 3.30 ಕ್ಕೆ ಕಡಬ ಸಿಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ಮೂಲಕ ಚಾಯಿವಾಲ ಎಣಿಸಿಕೊಂಡಿದ್ದಾರೆ.
ಶಿವಪ್ರಸಾದ್ ಬಿಕಾಂ ಮತ್ತು ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದು, ಪದವಿ ಶಿಕ್ಷಣದ ನಂತರ, ದುಬೈನಲ್ಲಿ ಉದ್ಯೋಗದಲ್ಲಿದ್ದರು, ಆದರೆ ಅಲ್ಲಿಗೆ ಸೇರಿದ ಮೂರು ತಿಂಗಳಲ್ಲಿ ಕೊರೊನಾದಿಂದಾಗಿ ಕೆಲಸವನ್ನು ತೊರೆದು ಮನೆಗೆ ಮರಳಬೇಕಾಯಿತು. ಮನೆಗೆ ಮರಳಿದ ನಂತರ ಶಿವಪ್ರಸಾದ್ ಸುಮ್ಮನಿರಲಿಲ್ಲ. ತಮ್ಮ ತಂದೆ ಸಿರ್ವಹಿಸುತ್ತಿದ್ದ ಸಣ್ಣ ಕ್ಯಾಂಟೀನ್ ನಲ್ಲಿ ದುಡಿಯುತ್ತಿದ್ದರು. ಈ ಕ್ಯಾಂಟಿನ್ ಸುಮಾರು 50 ವರ್ಷ ಹಳೆಯದು. ತನ್ನ ಅಜ್ಜನ ಕಾಲದಿಂದಲೂ ಕಾರ್ಯನಿರ್ವಹಿಸುತ್ತಿದೆ. ಅವರ ಅಜ್ಜ ಮತ್ತು ತಂದೆ ಕ್ಯಾಂಟೀನ್ ನಡೆಸಿದ ನಂತರ, ಈಗ ಶಿವಪ್ರಸಾದ್ ಅದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಬಳಿಕ ಬೆಳಿಗ್ಗೆ ಸಂಜೆ ಚಾಯಿವಾಲನಾಗಿ ಕಡಬ ಸಿಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ನಾನು ವಿದೇಶದಿಂದ ಹಿಂದಿರುಗಿದ ನಂತರ ತಮ್ಮ ಕುಟುಂಬವು ನಿರ್ವಹಿಸುವ ಸಣ್ಣ ಕ್ಯಾಂಟಿನ್ ನಡೆಸಲು ನಿರ್ಧರಿಸಿದೆ, ಚಹಾ ಮಾರುವ ಕೆಲಸ ಮಾಡುವುದನ್ನು ಯಾವುದೇ ಕೀಳರಿಮೆ ಅಂದುಕೊಳ್ಳವಾರದು, ಕಷ್ಟಪಟ್ಟು ದುಡಿದಾಗ ಅದಕ್ಕೆ ಪ್ರತಿಫಲ ಸಿಗುತ್ತದೆ ಎಂದು ಶಿವಪ್ರಸಾದ್ ಹೇಳಿದ್ದಾರೆ.