ಕೋಟ, ನ. 22 (DaijiworldNews/MB) : ಕಸಗಟ್ಟಿಗಳನ್ನು ಒಗ್ಗೂಡಿಸಿ ಬೆಂಕಿ ಹಾಕುವ ಸಂದರ್ಭದಲ್ಲಿ ಸೀರೆಗೆ ಬೆಂಕಿ ತಾಗಿ ವೃದ್ದೆಯೋರ್ವರು ಅಗ್ನಿಗಾಹುತಿಯಾದ ಘಟನೆ ಮಣೂರು ಜಟ್ಟಿಗೇಶ್ವರದ ಸಮೀಪದಲ್ಲಿ ಶನಿವಾರ ನಡೆದಿದೆ.

ಮೃತ ವೃದ್ಧೆ ಮಣೂರು ಜಟ್ಟಿಗೇಶ್ವರದ ಎದುರುಗಡೆ ನಿವಾಸಿ ಅವಿವಾಹಿತೆಯಾಗಿದ್ದ ಬಾಗಿ (68) ಎಂದು ತಿಳಿದು ಬಂದಿದೆ.
ಬೆಳಿಗ್ಗೆ ಸುಮಾರು 10 ಗಂಟೆಗೆ ಬಾಗಿ ಎಂಬ ವೃದ್ದೆಯು ತನ್ನ ಮನೆಯ ವಠಾರದಲ್ಲಿದ್ದ ಕಸಗಟ್ಟಿಗಳನ್ನು ಒಗ್ಗೂಡಿಸಿ ಬೆಂಕಿ ಹಾಕಿದ್ದು ಈ ವೇಳೆ ಬೆಂಕಿಯು ಅವರ ಸೀರೆಗೆ ತಾಗಿದೆ. ಆ ಸಂದರ್ಭದಲ್ಲಿ ವೃದ್ದೆಗೆ ತಲೆ ತಿರುಗಿದ್ದು ಬೆಂಕಿಯ ರಾಶಿಗೆ ಬಿದ್ದಿದ್ದಾರೆ.
ಬಳಿಕ ವೃದ್ದೆಯನ್ನು ಸ್ಥಳೀಯರು ಮಣಿಪಾಲದ ಖಾಸಗಿ ಆಸ್ಪತ್ರೆ ದಾಖಲಿಸಿದ್ದು ಸಂಜೆಯ ವೇಳೆಗೆ ವೃದ್ದೆ ಸಾವನ್ನಪ್ಪಿದ್ದಾರೆ.