ಕೋಟ,ನ. 22 (DaijiworldNews/HR): ಕೋಡಿ ಕನ್ಯಾಣ, ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಯಕ್ಷಿಮಠ ಪಾರಂಪಳ್ಳಿಯ ಹಲವು ಭಾಗಗಳಲ್ಲಿ ಹೊಳೆಯ ಉಪ್ಪು ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.




ಪ್ರತಿವರ್ಷ ಮಳೆಗಾಲದಿಂದ ಹಿಡಿದು ಬೇಸಿಗೆಗಾಲದವರೆಗೂ ಇದೇ ಹೊಳೆ ನೀರು ನುಗ್ಗಿ ಭತ್ತ, ಶೇಂಗಾ, ಉದ್ದು ಹೀಗೆ ಹಲವು ಬಗೆಯ ಬೆಳೆಗಳು ಸರ್ವನಾಶಗೊಳ್ಳುತ್ತಿದೆ ಈ ಬಗ್ಗೆ ಹಲವು ಬಾರಿ ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಶಾಸಕರು ಹಾಗೂ ಸಚಿವರಲ್ಲಿ ದಂಬಾಲು ಬಡಿದರೂ ಪ್ರಯೋಜವಾಗಲಿಲ್ಲ. ಹಾಗಾಗಿ ಈ ಭಾಗದ ಜನರ ಸಮಸ್ಯೆ ಬಗೆಹರಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಉಪ್ಪು ನೀರು ಕೃಷಿ ಭೂಮಿಗೆ ನುಗ್ಗದಂತೆ ತಡೆಗೋಡೆ ನಿರ್ಮಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದುದಾಗಿದೆ.
ಕೋಡಿ ಕನ್ಯಾಣದ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ವ್ಯಾಪ್ತಿ ಸೇರಿದಂತೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ,ಯಕ್ಷಿಮಠ ಭಾಗಗಳ ಸಮುದ್ರ ಸಂಪರ್ಕಿಸುವ ಉಪ್ಪು ನೀರು ಕೃಷಿಭೂಮಿಗೆ ನುಗ್ಗುತ್ತಿದ್ದು ಪ್ರತಿವರ್ಷ ಭಾರೀ ಪ್ರಮಾಣದ ಬೆಳೆ ಹಾನಿಯಾಗುತ್ತಿದೆ ಈ ಬಗ್ಗೆ ಸ್ಥಳೀಯಾಡಳಿತದ ಮುಖಂಡರ ಮೂಲಕ ಮಹಾಬಲ ಕುಂದರ್ ನೇತ್ರತ್ವದಲ್ಲಿ ಸ್ಥಳೀಯ ಶಾಸಕ, ಸಚಿವರ ಗಮನಕ್ಕೆ ತಂದರೂ ತಡೆಬೇಲಿ ನಿರ್ಮಿಸಲು ಮೀನಾಮೇಷ ಎಣಿಸುವ ಸ್ಥಿತಿ ಸೃಷ್ಠಿಸುತ್ತಿದ್ದಾರೆ.
ಒಂದು ಕೋಟಿ ಬಿಡುಗಡೆಗೊಂಡರೂ ಕಾಮಗಾರಿಗೆ ಚಾಲನೆ ಸಿಗಲಿಲ್ಲ, ಸ್ಥಳೀಯ ಬಾಜಪ ಮುಖಂಡ ಮಹಾಬಲ ಕುಂದರ್ ರವರ ಮನವಿಯ ಮೆರೆಗೆ ಸ್ಥಳೀಯ ಶಾಸಕರ ಪ್ರೇರಣೆಯಂತೆ ಆಗಿನ ಬಿಜೆಪಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಡೆದಂಡೆಗೆ ಒಂದು ಕೋಟಿ ರೂ ಮಂಜುರಾತಿಗೊಳಿಸಿದರೂ ಕಾಮಗಾರಿ ಆಗುತ್ತಿಲ್ಲ.