ಉಡುಪಿ, ನ. 22 (DaijiworldNews/SM): ಗೋವಿಗಾಗಿ ಒಂದು ದಿನ ಶೀರ್ಷಿಕೆಯಡಿ ಕಳೆದ ಹಲವಾರು ವರ್ಷಗಳಿಂದಲೂ ಗೋ ಶಾಲೆಗೆ ನೆರವು ನೀಡುತ್ತಾ ಬಂದಿರುವ ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ) ಸೂಡ ಸಂಸ್ಥೆಯು ತನ್ನ ಸೇವೆಯನ್ನು ಮುಂದುವರೆಸಿದೆ.



ಪ್ರಸ್ತುತ ವರ್ಷವೂ ಸಂಘದ ಸದಸ್ಯರು, ಗ್ರಾಮಸ್ಥರು ಮತ್ತು ದಾನಿಗಳ ನೆರವಿನೊಂದಿಗೆ ಸಂಗ್ರಹಿಸಿದ ಒಂದು ಲೋಡು ಬೈ ಹುಲ್ಲನ್ನು ಕಾರ್ಕಳ ಚಿಕ್ಕಲ್ ಬೆಟ್ಟಿನಲ್ಲಿರುವ ಗೋ ಶಾಲೆಗೆ ನೀಡಲಾಯಿತು.
ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ವಿಷ್ಣುಮೂರ್ತಿ ಭಟ್ ರವರು ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಿದರು. ನಂತರ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಬೆಳ್ಮಣ್ ಇವರ ಸಹಯೋಗದೊಂದಿಗೆ ಉಭಯ ಸಂಸ್ಥೆಗಳ ಎರಡು ಲೋಡು ಬೈ ಹುಲ್ಲನ್ನು ಗೋ ಶಾಲೆಗೆ ನೀಡಲಾಯಿತು.
ಬ್ರೈಟ್ ಗ್ರೂಪ್ ಫ್ರೆಂಡ್ಸ್ (ರಿ) ಸೂಡ ಇದರ ಗೌರವ ಸಲಹೆಗಾರರಾದ ಶಂಕರ್ ಕುಂದರ್, ಜೇರಿ ಎಲ್ ಡಿ ಸೋಜ ಸಂಘದ ಅಧ್ಯಕ್ಷರಾದ ಪ್ರದೀಪ್ ದೇವಾಡಿಗ, ಕಾರ್ಯದರ್ಶಿ ಅನೀಶ್, ಕೋಶಾಧಿಕಾರಿ ಶ್ರೀನಾಥ್ ಶೆಟ್ಟಿ, ವಿಜಯ ರಾಜ್, ಅರುಣ್ ಕುಮಾರ್, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಬೆಳ್ಮಣ್ ಇದರ ಪ್ರಮುಖರು ಉಪಸ್ಥಿತರಿದ್ದರು