ಮಂಗಳೂರು, ನ.23 (DaijiworldNews/HR): ನೀರಿನ ಟ್ಯಾಂಕ್ ಪರಿಶೀಲನೆಗೆ ತೆರಳಿದ ಕಾರ್ಮಿಕ ಬಹುಮಹಡಿ ಕಟ್ಟಡದ ಮೇಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪ್ಯಾರೀಸ್ ಜಂಕ್ಷನ್ ನಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.

ಸಾವನ್ನಪ್ಪಿರುವವರನ್ನು ಚೆಂಬುಗುಡ್ಡೆ ನಿವಾಸಿ ಮುತ್ತು(45) ಎಂದು ಗುರುತಿಸಲಾಗಿದೆ.
ಇನ್ ಲ್ಯಾಂಡ್ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ನೀರಿನ ಟ್ಯಾಂಕ್ ಪರಿಶೀಲನೆಗೆಂದು ತೆರಳಿದಾಗ ಕಾಲು ಜಾರಿ ಕೆಳಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.