ಮಂಗಳೂರು, ನ.23 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನವೆಂಬರ್ 21 ರ ರಾತ್ರಿಯವರೆಗೆ 21,16,441 ಕಾಲೇಜು ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ಅದರಲ್ಲಿ 29 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.

ಕೊರೊನಾ ಸೋಂಕು ದೃಢಪಟ್ಟ 29 ವಿದ್ಯಾರ್ಥಿಗಳಲ್ಲಿ 16 ಮಂದಿ ಮಂಗಳೂರಿನವರು, ನಾಲ್ವರು ಸುಳ್ಯ, ಏಳು ಮಂದಿ ಬಂಟ್ವಾಳ ಮತ್ತು ಒಬ್ಬರು ಬೆಳ್ತಂಗಡಿ ಮತ್ತು ಒಬ್ಬರು ಪುತ್ತೂರಿನವರು. ಈ ವಿದ್ಯಾರ್ಥಿಗಳಲ್ಲಿ ಯಾರಿಗೂ ಆರೋಗ್ಯದ ತೊಂದರೆಗಳಿಲ್ಲ. ಹಾಗಾಗಿ ಅವರನ್ನು ಮನೆಯವರೊಂದಿಗೆ ಸಂಪರ್ಕ ಇಟ್ಟುಕೊಳ್ಳದಂತೆ ಸೂಚಿಸಲಾಗಿದ್ದು, ಆಯಾ ಕಾಲೇಜುಗಳ ಹಾಸ್ಟೆಲ್ಗಳಲ್ಲಿ ಅವರನ್ನು ಪ್ರತ್ಯೇಕವಾಗಿರುವಂತೆ ತಿಳಿಸಲಾಗಿದೆ.
ಡಿಎಚ್ಒ ಡಾ.ರಾಮಚಂದ್ರ ಅವರ ಮಾಹಿತಿಯ ಪ್ರಕಾರ, ಜಿಲ್ಲೆಯ ಎಂಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಎಂಟು ಖಾಸಗಿ ಮತ್ತು ಒಂದು ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯಗಳಲ್ಲಿ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.