ಜೂ 06: ವೇತನ ಪರಿಷ್ಕರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಮುಷ್ಕರ ನಡೆಸುತ್ತಿದ್ದ ಗ್ರಾಮೀಣ ಅಂಚೆ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅವರ ಸಂಬಳವನ್ನು ಮೂರು ಪಟ್ಟು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಇದು 2016 ರ ಜ1 ರಿಂದ ಪೂರ್ವಾನ್ವಯವಾಗಲಿದೆ.
14,500 ರೂ. ತನಕ ವೇತನ ಏರಿಕೆಗೊಳಿಸಲಾಗಿದ್ದು, ಅನುಷ್ಟಾನಗೊಂಡ ಬಳಿಕ ಒಂದೇ ಕಂತಿನಲ್ಲಿ ಪಾವತಿ ಮಾಡಲು ನಿರ್ಧರಿಸಲಾಗಿದೆ. ಪ್ರಸ್ತುತ 2295 ರೂ. ಸಂಬಳ ಪಡೆಯುತ್ತಿರುವವರಿಗೆ 10 ಸಾವಿರ ರೂ, 2745 ರೂ ಸಂಬಳ ಪಡೆಯುವವರಿಗೆ 12 ಸಾವಿರ ಹಾಗೂ 4115 ರೂ ಸಂಬಳ ಪಡೆಯುವವರಿಗೆ 14 ಸಾವಿರದ 500 ರೂ ಪಡೆಯಲಿದ್ದಾರೆ.ಇನ್ನು ಈ ನಡುವೆ ಭತ್ಯೆಯನ್ನು ಕೂಡ ಏರಿಕೆ ಮಾಡಲಾಗಿದ್ದು ಶೇ. 3 ವೇತನ ಏರಿಕೆಗೂ ಅನುಮತಿ ನೀಡಲಾಗಿದೆ. ಇದು ಪ್ರತಿ ವರ್ಷ ಜನವರಿ 1ರಂದು ಅಥವಾ ಜುಲೈ 1 ಜಾರಿಗೆ ಬರಲಿದೆ.