ಉಡುಪಿ, ನ. 23 (DaijiworldNews/SM): ಉಡುಪಿಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಸೋಮವಾರದಂದು ಕೇವಲ ಹನ್ನೊಂದು ಮಂದಿಯಲ್ಲಿ ಮಾತ್ರವೇ ಸೋಂಕು ಕಾಣಿಸಿಕೊಂಡಿದೆ. ಈ ನಡುವೆ ಚೇತರಿಕೆ ಕಾಣುತ್ತಿರುವವರ ಸಂಖ್ಯೆ ಉತ್ತಮವಾಗಿದೆ. ಸೋಮವಾರ 28 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಉಡುಪಿ ಜಿಲ್ಲೆಯ ಸೋಮವಾರದ ಕೊರೋನಾ ವರದಿ:
ಸೋಮವಾರದಂದು 11 ಮಂದಿಯಲ್ಲಿ ಸೋಂಕು ಪತ್ತೆ
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು-22523
28-ಸೋಮವಾರ ಗುಣಮುಖರಾದವರು
22155-ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು
ಪ್ರಸ್ತುತ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು-181 ಮಂದಿ
ಜಿಲ್ಲೆಯಲ್ಲಿ ಒಟ್ಟು ಸೋಂಕಿಗೆ ಬಲಿಯಾದವರು-187 ಮಂದಿ