ಮಂಗಳೂರು, ನ. 24 (DaijiworldNews/SM): ಯುವಕನೊಬ್ಬನ ಮೇಲೆ ತಲ್ವಾರ್ ದಾಳಿ ನಡೆದಿರುವ ಘಟನೆ ನಗರದ ಫಳ್ನೀರ್ ಖಾಸಗಿ ಆಸ್ಪತ್ರೆ ಸಮೀಪದಲ್ಲಿ ನಡೆದಿದೆ. ಘಟನೆಯಲ್ಲಿ ನೌಶಾದ್(30) ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇರಿತಕ್ಕೊಳಗಾದ ಯುವಕ ಇತ್ತೀಚೆಗೆ ಕಂದಾವರ ಮಸೀದಿ ಸಮೀಪದಲ್ಲಿ ಇರಿತಕ್ಕೊಳಗಾದ ಅಝೀಝ್ ಎಂಬವರ ಅಳಿಯನೆಂದು ತಿಳಿದುಬಂದಿದೆ. ಯಾವ ಕಾರಣಕ್ಕೆ ದಾಳಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಒಂದೇ ತಂಡ ಎರಡೂ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.