ಕಾಸರಗೋಡು, ನ. 24 (DaijiworldNews/MB) : ಡಿ . 14 ರಂದು ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ 2617 ಮಂದಿ ಕಣದಲ್ಲಿದ್ದು, ಐದು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ನಾಮಪತ್ರ ಹಿಂತೆಗೆಯುವ ದಿನ ಕೊನೆಗೊಳ್ಳುವುದರೊಂದಿಗೆ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಹೊರಬಿದ್ದಿದೆ.
ಜಿಲ್ಲಾ ಪಂಚಾಯತ್ನ 17ವಾರ್ಡ್ಗಳಿಗೆ 65 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ನೇತೃತ್ವದ ಯಡಿಎಫ್, ಸಿಪಿಐಎಂ ನೇತೃತ್ವದ ಎಲ್ಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್.ಡಿ.ಎ ನಡುವೆ ಪೈಪೋಟಿ ನಡೆಯುತ್ತಿದೆ.
ಕಾಸರಗೋಡು, ನೀಲೇಶ್ವರ, ಕಾಞಂಗಾಡ್ ನಗರಸಭೆಗೆ 330, ಕಾಞಂಗಾಡ್, ನೀಲೇಶ್ವರ, ಪರಪ್ಪ, ಕಾಸರಗೋಡು, ಕಾರಡ್ಕ, ಮಂಜೇಶ್ವರ ಬ್ಲಾಕ್ ಪಂಚಾಯತ್ಗೆ 263 ಹಾಗೂ 38 ಗ್ರಾಮ ಪಂಚಾಯತ್ಗಳಿಗೆ 1959 ಮಂದಿ ಕಣದಲ್ಲಿದ್ದಾರೆ.