ಕಾಸರಗೋಡು, ನ. 25 (DaijiworldNews/MB) : ಕೇಂದ್ರ ಸರಕಾರದ ಕಾರ್ಮಿಕ-ಕೃಷಿ ವಿರೋಧಿ ನೀತಿ ಪ್ರತಿಭಟಿಸಿ ನವಂಬರ್ 26 ರಂದು ವಿವಿಧ ಕಾರ್ಮಿಕ ಸಂಘಟನೆಗಳು ರಾಷ್ಟೀಯ ಮುಷ್ಕರಕ್ಕೆ ಕರೆ ನೀಡಿದೆ.

ನಾಳೆ (25) ರಾತ್ರಿ 12 ಗಂಟೆಯಿಂದ 26 ರ ರಾತ್ರಿ 12 ಗಂಟೆ ತನಕ 24 ಗಂಟೆಗಳ ಕಾಲ ಮುಷ್ಕರ ನಡೆಯಲಿದ್ದು, ಕೇರಳದಲ್ಲಿ ಬಹುತೇಕ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಬಿಜೆಪಿ ಬೆಂಬಲಿತ ಬಿಎಂಎಸ್ ಕಾರ್ಮಿಕ ಸಂಘಟನೆ ಹೊರತು ಪಡಿಸಿ ಉಳಿದೆಲ್ಲಾ ಸಂಘಟನೆಗಳು ಬೆಂಬಲ ಘೋಷಿಸಿದ್ದು, ಇದರಿಂದ ಮುಷ್ಕರ ಕೇರಳವನ್ನು ಸ್ತಬ್ದಗೊಳಿಸುವ ಸಾಧ್ಯತೆ ಇದೆ.