ಮಂಗಳೂರು, ನ.25 (DaijiworldNews/PY): "ಗ್ರಾಮ ಪಂಚಾಯತ್ ಚುನಾವಣೆಗೆ ಇನ್ನೇನೂ ಕೆಲವೇ ದಿನಗಳಲ್ಲಿ ದಿನಾಂಕ ನಿಗದಿಯಾಗಲಿದ್ದು, ಆ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್ನಲ್ಲಿ ಬಿಜೆಪಿ ಗೆಲುವಿಗಾಗಿ ಎರಡು ಗ್ರಾಮ ಸ್ವರಾಜ್ ಸಮಾವೇಶ ನಡೆಯಲಿದೆ" ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಹೇಳಿದ್ದಾರೆ.

ಪತ್ರಿಕಾಗೋಷ್ಥಿಯಲ್ಲಿ ಮಾತನಾಡಿದ ಅವರು, "ಯಾವುದೇ ದಿನದಲ್ಲಾದರೂ ಗ್ರಾ.ಪಂ.ಚುಣಾವಣೆಯ ದಿನಾಂಕ ನಿಗಧಿಯಾಗಬಹುದು. ಹಾಗಾಗಿ ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ಈ ಬಾರಿ ಬಿಜೆಪಿ ಗೆಲ್ಲಲೇಬೇಕು ಎಂಬ ಹಿನ್ನಲೆಯಲ್ಲಿ ಎರಡು ಗ್ರಾಮ ಸ್ವರಾಜ್ ಸಮಾವೇಶ ನಡೆಯಲಿದೆ. ಮೂಡಬಿದಿರೆ, ಮಂಗಳೂರು ಉತ್ತರ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯದವರನ್ನು ಸೇರಿಸಿ ಈ ಒಂದು ಕಾರ್ಯಕ್ರಮ ನಡೆಯಲಿದೆ" ಎಂದು ತಿಳಿಸಿದ್ದಾರೆ.
"ಇನ್ನು ಈ ಕಾರ್ಯಕ್ರಮಕ್ಕೆ ಅಶ್ವತ್ ನಾರಾಯಣ, ಶೋಭಾ ಕರದ್ಲಾಂಜೆ, ಕೋಟ ಶ್ರೀನಿವಾಸ ಪೂಜಾರಿ, ಮಹೇಶ್ ತೆಂಗಿನಕಾಯಿ ಹಾಗೂ ರಾಜ್ಯದ ಪ್ರಮುಖರು ಭಾಗವಹಿಸಲಿದ್ದಾರೆ. ಬಿಜೆಪಿಯು ಪ್ರತಿಯೊಂದು ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಸಂಘಟನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ" ಎಂದಿದ್ದಾರೆ.
"ಕಾರ್ಯಕ್ರಮದಲ್ಲಿ ಪಕ್ಷದ ಚಿಹ್ನೆಇರೋದಿಲ್ಲ. ಆದರೆ, ಬಿಜೆಪಿಯ ಇಡೀ ರಾಜ್ಯದ ತಂಡ ಅವರೊಂದಿಗೆ ಇರುತ್ತದೆ. 225 ಗ್ರಾ.ಪಂ ಚುನಾವಣೆ ನಡೆಯಲಿದೆ ಹಾಗೂ 218 ಕುಟುಂಬ ಮಿಲನ ಕಾರ್ಯಕ್ರಮ ನಡೆದಿದೆ. ಇನ್ನು 1,186 ಬೂತ್ಗಳಲ್ಲಿ ಚುನಾವಣೆ ನಡೆಯಲಿದೆ. ಪಂಚರತ್ನಗಳು ರಚನೆಯಾಗಲಿದೆ. 25 ಸಾವಿರಕ್ಕೂ ಹೆಚ್ಚು ಪೇಜ್ ಪ್ರಮುಖ್ ಇರಲಿದ್ದಾರೆ ಹಾಗೂ ಇದು ಮುಂದಿನ ಚುನಾವಣೆಗೆ ಪೂರಕವಾಗಲಿದೆ" ಎಂದು ಹೇಳಿದ್ದಾರೆ.