ಮಂಗಳೂರು, ನ. 25 (DaijiworldNews/SM): ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗಾಗಿ ಇಬ್ಬರು ಮಕ್ಕಳು ಸೇರಿದಂತೆ 27 ಮಂದಿ ಕೂದಲು ದಾನ ಮಾಡಿವ ಮೂಲಕ ಉದಾರತೆ ಮೆರೆದಿದ್ದಾರೆ.







ಮಂಗಳೂರಿನ ಲೇಡಿಸ್ ಸರ್ಕಲ್ 82, ಮೇರಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸೆಲೂನ್ ಬಂಟ್ಸ್ ಹಾಸ್ಟೆಲ್ ಆಯೋಜಿಸಿದ ‘ಹೇರ್ ಫಾರ್ ಹೋಪ್’ ಕೇಶ ದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರು, ಮಕ್ಕಳು, ಯುವತಿಯರು ತಮ್ಮ ಅಂದದ ಕೂದಲನ್ನು ದಾನ ಮಾಡಿದರು.
ಕಳೆದ ಒಂದುವಾರದಿಂದ ಕೇಶ ದಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಾನವೀಯ ನೆಲೆಯಲ್ಲಿ 27 ಮಂದಿ ಮಹಿಳೆಯರು ಕೇಶ ನೀಡಿರು. ಈ ಪೈಕಿ ಎಂಟು ವರ್ಷದ ಮಗು ಹಾಗೂ ಒಂಬತ್ತು ವರ್ಷದ ಮತ್ತೊಬ್ಬ ಮಗು ಕೂದಲನ್ನು ನೀಡುವ ಮೂಲಕ ಮಾದರಿಯೆಣಿಸಿದರು.
ಕೇಶ ದಾನ ಮಾಡಲು ಕನಿಷ್ಟ 12 ಇಂಚುಗಳಷ್ಟು ಉದ್ದ ಅಗತ್ಯವಿದೆ. ಉದ್ದ ಜಡೆಯ ಮಹಿಳಾಮಣಿಯರು ಮತ್ತ ಕೂದಲನ್ನು ದಾನ ಮಾಡುವ ಮೂಲಕ ಕ್ಯಾನ್ಸರ್ ಪೀಡಿತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಈ ಕಾರ್ಯದಲ್ಲಿ ಭಾಗಿಯಾದ ಮಹಿಳೆಯ ಕಾರ್ಯ ನಿಜಕ್ಕೂ ಇತರರಿಗೆ ಪ್ರೇರಣೆ.