ಮಂಗಳೂರು, ನ. 26 (DaijiworldNews/MB) : ಬೊಕ್ಕಪಟ್ಟಣದ ಕರ್ನಲ್ ಗಾರ್ಡನ್ ಒಳಗಡೆ ರೌಡಿಶೀಟರ್ ಓರ್ವನನ್ನು ಬುಧವಾರ ರಾತ್ರಿ ಭೀಕರವಾಗಿ ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ.







ಮೃತ ವ್ಯಕ್ತಿಯನ್ನು ಇಂದ್ರಜೀತ್ (29) ಎಂದು ಹೇಳಲಾಗಿದ್ದು ಈತ ರೌಡಿಶೀಟರ್ ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ಈತನು ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಬಳಿಕ ರಾತ್ರಿ ಸುಮಾರು 2 ಗಂಟೆಗೆ ಕರ್ನಲ್ ಗಾರ್ಡನ್ ಬಳಿ ಈತನ ಹತ್ಯೆಗೈಯಲಾಗಿದೆ ಎನ್ನಲಾಗಿದೆ.
ಈ ಹಿಂದೆ ಈತನ ಮೇಲೆ ತಲವಾರ್ ದಾಳಿ ನಡೆದಿತ್ತು ಎಂಬ ಮಾಹಿತಿ ಲಭಿಸಿದೆ.