ಮಂಗಳೂರು, ನ. 26 (DaijiworldNews/MB) : ಸರ್ಕ್ಯೂಟ್ ಹೌಸ್ನಿಂದ ಬಿಜೈಗೆ ಹೋಗುವ ಮುಖ್ಯ ರಸ್ತೆಯಲ್ಲಿ ನೀರಿನ ಪೈಪ್ಲೈನ್ ಹಾಕುವ ಗುತ್ತಿಗೆ ಕೆಲಸವನ್ನು ವಹಿಸಿಕೊಂಡಿರುವ ಸಂಸ್ಥೆಯು ಪೈಪ್ಲೈನ್ ಹಾಕುವ ಉದ್ದೇಶದಿಂದ ನವೆಂಬರ್ 25 ರ ಬುಧವಾರ ರಸ್ತೆಯನ್ನು ಅಗೆದು ಹಾಕಿದೆ. ಬುಧವಾರ ರಾತ್ರಿ ಈ ರಸ್ತೆಯನ್ನು ಅಗೆದು ಹಾಕಿದ್ದು ಆದರೆ ಈ ಗುಂಡಿಯನ್ನು ಮಣ್ಣಿನಿಂದ ತುಂಬದೆ ಹಾಗೆಯೇ ಬಿಟ್ಟಿದ್ದಾರೆ. ಇದು ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.



ಕಾಮಗಾರಿ ಪ್ರಗತಿಯ ಬಗ್ಗೆ ಈ ರಸ್ತೆಯಲ್ಲಿ ನೀರಿನ ಪೈಪ್ಲೈನ್ ಹಾಕುವ ಗುತ್ತಿಗೆ ಕೆಲಸವನ್ನು ವಹಿಸಿಕೊಂಡಿರುವ ಸಂಸ್ಥೆಯು ಸೂಚನಾ ಫಲಕವನ್ನು ಹಾಕಿಲ್ಲ. ಈ ಕಾರಣದಿಂದಾಗಿ ಆ ರಸ್ತೆಯಲ್ಲಿ ವಾಹನದಲ್ಲಿ ಸಂಚಾರ ಮಾಡುತ್ತಿರುವವರು ತೊಂದರೆಗೆ ಒಳಗಾಗಿದ್ದಾರೆ.
ಗುಂಡಿಗೆ ಮಣ್ಣು ಹಾಕದೆ ಹಾಗೆಯೇ ಉಳಿಸಿ ಜನರ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ. ಸೂಚನಾ ಫಲಕವನ್ನಾದರೂ ಹಾಕಬೇಕು ಎಂಬ ಕನಿಷ್ಠ ಜ್ಞಾನವೂ ಇವರಿಗೆ ಇಲ್ಲ ಎಂದು ಸಾರ್ವಜನಿಕರು ನಗರ ಪಾಲಿಕೆ ಹಾಗೂ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.