ಉಡುಪಿ, ನ.27 (DaijiworldNews/PY): ಉಡುಪಿಯ ಕಲ್ಸಂಕ - ಅಂಬಾಗಿಲು ದ್ವಿಪದ ರಸ್ತೆಯ ವಿಜಯತಾರ ಹಿಂಬದಿಯ ಮಠದ ಬೆಟ್ಟು 26 ನೇ ಕಡಿಯಾಳಿ ವಾರ್ಡ್ ವೆಟ್ ವೆಲ್ ರಸ್ತೆ ಪರಿಸರದ ನಿವಾಸಿಗಳದ್ದು ನರಕ ಸದೃಶ ಜೀವನ.













ಪ್ರತಿಷ್ಠಿತ ಬಡಾವಣೆಯಾದ ಇಲ್ಲಿ ನಾಲ್ಕು ನೂರಕ್ಕೂ ಮಿಕ್ಕಿ ಕುಟುಂಬ ಕೊಳಚೆನೀರಿನ ನಡುವೆ ಬದುಕು ಸಾಗಿಸುವಂತಾಗಿದೆ.
ಕಳೆದ ಮೂರು ತಿಂಗಳನಿಂದ ಕಾಂಕ್ರೀಟ್ ಮಧ್ಯ ರಸ್ತೆಯಲ್ಲಿ ಡ್ರೈನೇಜ್ ಒಡೆದು ನೀರು ಹರಿಯುತ್ತಿದ್ದರೂ, ಸ್ಥಳೀಯಾಡಳಿತದ ಪ್ರತಿನಿಧಿಗಳು, ಅಧಿಕಾರಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ.
ಸಮಸ್ಯೆ ಪರಿಹಾರಕ್ಕೆ ನಗರ ಸಭೆ ಅಧಿಕಾರಿಗಳಿಗೆ, ನಗರ ಸಭಾ ಸದಸ್ಯರಿಗೆ, ಸ್ಥಳೀಯ ಶಾಸಕರಿಗೆ ಈಗಾಗಲೇ ಸಾಕಷ್ಟು ಬಾರಿ ಆಗ್ರಹಿಸಿದರೂ ಈವರೆಗೆ ಯಾವುದೇ ಶಾಶ್ವತ ಪರಿಹಾರ ಕಂಡಿಲ್ಲ.
ಈ ಹಿಂದೆ ಜಿಲ್ಲಾಧಿಕಾರಿ, ಜಿಲ್ಲಾ ಅರೋಗ್ಯ ಅಧಿಕಾರಿಗಳ ಗಮನಕ್ಕೆ ನೂರಾರು ಬಾರಿ ತಂದರೂ ಈವರೆಗೆ ಯಾವುದೇ ಸ್ಪಂದನೇ ಇಲ್ಲದೇ ಇರುವುದು ದುರದೃಷ್ಟಕರ.!!
ಕೊರೊನಾದಂತಹ ಮಹಾಮಾರಿ ನಡುವೆ ಇನ್ನೊಂದು ಸಾಂಕ್ರಾಮಿಕ ರೋಗ ಈ ಪರಿಸರ, ಉಡುಪಿ ನಗರಕ್ಕೆ ಹರಡುವುದಕ್ಕಿಂತ ಮುಂಚೆ ಸೂಕ್ತ ಶಾಶ್ವತ ಪರಿಹಾರ ಬೇಕಾಗಿದೆ. ಸ್ಥಳೀಯ ಮಠದ ಬೆಟ್ಟು ನಿವಾಸಿಗಳಿಗೆ ಈ ಗಂಭೀರ ಸಮಸ್ಯೆಯ ಮುಕ್ತಿಗಾಗಿ ಕಾಯುತ್ತಿದ್ದಾರೆ.