ಬೆಳ್ತಂಗಡಿ, ನ. 27 (DaijiworldNews/MB) : ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ವೇಳೆ ವಿದ್ಯುತ್ ಕಂಬದಲ್ಲಿದ್ದ ಸಿಬ್ಬಂದಿಗೆ ಶಾಕ್ ತಗುಲಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಕಳೆಂಜ ಇಲ್ಲಿಯ ಶಾಲೆತ್ತಡ್ಕ ಜಂಕ್ಷನ್ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.



ಮೃತರನ್ನು ಮೂಡುಬಿದಿರೆಯ ಗುತ್ತಿಗೆದಾರರಾದ ಕುಮಾರ್ ಎಲೆಕ್ಟ್ರಿಕಲ್ಸ್ನ ಸಿಬ್ಬಂದಿಗಳಾದ ಪ್ರತಾಪ್ ಮೂಡುಬಿದಿರೆ (20) ಎಂದು ಗುರುತಿಸಲಾಗಿದೆ. ನಾಗಪ್ಪ ಮೂಡುಬಿದಿರೆ ಹಾಗೂ ಕಿಶೋರ್ ಮೂಡುಬಿದಿರೆ ಗಾಯಾಳುಗಳು.
ಪ್ರತಾಪ್ರವರು ವಿದ್ಯುತ್ ಕಂಬದ ಮೇಲೆ ಇರುವಾಗಲೇ ಶಾಕ್ ತಗುಲಿದ್ದು ಅಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.