ಉಡುಪಿ, ನ.27 (DaijiworldNews/PY): "ಕಾಶ್ಮೀರ ಗಡಿ ಭಾಗದ ಜನ ಅಥವಾ ಪಾಕಿಸ್ತಾನದ ಜನ ಮಂಗಳೂರಿನವರೆಗೂ ಬಂದಿದ್ದಾರೆ. ಅಥವಾ ಅಂತ ಮಾನಸಿಕತೆಯ ಜನ ಕಾರ್ಯಾಚರಣೆ ಮಾಡುವ ಭಯ ಹುಟ್ಟಿಸಿದೆ. ಅದಕ್ಕಾಗಿ ನಾನು ಸರಕಾರವನ್ನು ಆಗ್ರಹಿಸುತ್ತೇನೆ. ಇದನ್ನು ಯಾರು ಬರೆದಿದ್ದಾರೆ? ಯಾವ ಶಕ್ತಿ ಇದರ ಹಿಂದಿದೆ? ಕೇರಳ, ಕಾಶ್ಮೀರದಿಂದ ಇಲ್ಲಿಗೆ ಬಂದು ಆಶ್ರಯ ಪಡೆಯುತ್ತಿರುವವರು ಈ ಕೆಲಸ ಮಾಡಿರಬಹುದಾ? ಎಂಬುದು ತೀವ್ರ ತನಿಖೆಯಾಗಬೇಕು. ಗೃಹ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಕರಾವಳಿಯ ಸುತ್ತ ಕಟ್ಟೆಚ್ಚರ ವಹಿಸಬೇಕು ಎಂದು ಗೃಹ ಇಲಾಖೆಯನ್ನು ಆಗ್ರಹಿಸುತ್ತೇನೆ" ಎಂದರು.


ಇನ್ನು ಸುಳ್ಯದ ಲವ್ ಜಿಹಾದ್ನ ವಿಚಾರವಾಗಿ ಪ್ರತಿಕ್ರಿಯಿಸಿದ ಶೋಭಾ, "ದೇಶದಲ್ಲಿ ತ್ರಿಪಲ್ ತಲಾಖ್ ಘೋಷಣೆಯಾಗಿದ್ದರೂ ಇಂತಹ ದುರಹಂಕಾರ ತೋರಿಸುತ್ತಾ ಇದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಕಾನೂನು ಕ್ರಮ ಜರುಗಿಸಬೇಕು" ಎಂದು ಅವರು ಒತ್ತಾಯಿಸಿದರು.
"ಹಿಂದೂ ಹುಡುಗಿಗೆ ಪ್ರೀತಿಯ ಹೆಸರಲ್ಲಿ ಅನ್ಯಾಯ ಮಾಡಲಾಗಿದೆ. ಇದನ್ನು ಖಂಡಿಸುತ್ತೇನೆ ಮತ್ತು ಅದರ ಹೆಸರಲ್ಲಿ ನಡೆಯುವ ಅನ್ಯಾಯ ನಿಲ್ಲಬೇಕು. ರಾಜ್ಯ ಸರಕಾರದಿಂದ ಹೊಸ ಕಾನೂನು ಜಾರಿಯಾಗಬೇಕು. ಲವ್ ಜಿಹಾದ್ ಅನ್ನು ನಿಲ್ಲಿಸಿ ಹಿಂದೂ ಯುವತಿಯರ ರಕ್ಷಣೆ ಮಾಡುವಲ್ಲಿ ಸರಕಾರ ವಿಶೇಷ ಆಸಕ್ತಿ ವಹಿಸಿ ಹೊಸ ಕಾನೂನು ಮಾಡಬೇಕು" ಎಂದು ಸರಕಾರವನ್ನು ಒತ್ತಾಯಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಗೋಹತ್ಯೆ ನಿಷೇಧ ಕಾಯ್ದೆ, ಇದು ಹಳೆಯ ಕಾನೂನು. ಇದನ್ನು 2008ರಲ್ಲಿ ತಿರಸ್ಕಾರ ಮಾಡಿದರು. ಬಹಳ ಅಮಾನವೀಯ ರೀತಿಯಲ್ಲಿ ಗೋವುಗಳನ್ನು ಸಾಗಾಣೆ ಮಾಡುತ್ತಿದ್ದಾರೆ. ಗೋಹತ್ಯೆ ನಿಷೇಧಕ್ಕೆ ಕಾನೂನು ಜಾರಿಗೆ ಬರಬೇಕು. ಕಠಿಣ ಶಿಕ್ಷೆ ವಿಧಿಸಬೇಕು. ಇದಕ್ಕೂ ಮೊದಲು ಸರಕಾರವನ್ನು ಒತ್ತಾಯಿಸಿದ್ದೇವೆ. ಇಂದು ಕೂಡ ಅದರ ಅನುಷ್ಠಾನಕ್ಕೆ ಆಗ್ರಹಿಸುತ್ತೇನೆ" ಎಂದರು.