ಕಾಸರಗೋಡು,ನ. 27 (DaijiworldNews/HR): ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಆರಾಧನಾಲಯಗಳನ್ನು ಪ್ರಚಾರಕ್ಕೆ ಬಳಸಬಾರದು, ಮತಯಾಚನೆ ಮಾಡುವಂತಿಲ್ಲ, ದೇವರ ಚಿತ್ರ ಹೊಂದಿರುವ ಡೈರಿ, ಕ್ಯಾಲೆಂಡರ್, ಸ್ಟಿಕ್ಕರ್ಗಳನ್ನು ಅಭ್ಯರ್ಥಿಗಳು ವಿತರಿಸುವಂತಿಲ್ಲ ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದ್ದು, ಈ ಆದೇಶ ಉಲ್ಲಂಘಿಸುವುದು ಅಪರಾಧವಾಗಿದೆ ಎಂದು ತಿಳಿಸಿದೆ.

ಪ್ರಚಾರದ ಸಂದರ್ಭದಲ್ಲಿ ಜಾತಿ ದ್ವೇಷ, ಭಾಷೆಗಳ ನಡುವೆ ಸಂಘರ್ಷದ ಮಾತುಗಳು ಹಾಗೂ ಎದುರಾಳಿಗಳ ವೈಯುಕ್ತಿಕ ನಿಂದನೆ, ಖಾಸಗಿ ಬದುಕಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬಾರದು ಎಂದು ಸೂಚಿಸಿದೆ.
ಶೈಕ್ಷಣಿಕ ಸಂಸ್ಥೆಗಳು, ಆಟದ ಮೈದಾನಗಳನ್ನು ಪ್ರಚಾರಕ್ಕೆ ಬಳಸಬಾರದು. ಖಾಸಗಿ ವ್ಯಕ್ತಿಗಳ ಸ್ಥಳಗಳಲ್ಲಿ ಪ್ರಚಾರ ಸಾಮಾಗ್ರಿ ಅಳವಡಿಸುವ ಮೊದಲು ಮಾಲಕರಿಂದ ಲಿಖಿತ ಅನುಮತಿ ಪಡೆದು ಚುನಾವಣಾಧಿಕಾರಿ ಅಥವಾ ಸಿಬಂದಿಗಳ ಮುಂದೆ ಹಾಜರುಪಡಿಸಬೇಕು ಎಂದು ಆಯೋಗ ತಿಳಿಸಿದೆ.