ಮಂಗಳೂರು, ನ. 27 (DaijiworldNews/MB) : ನೀರುಡೆ ಪ್ರಾಂತ್ಯದ ದಿವಂಗತ ಫ್ರಾನ್ಸಿಸ್ ಮಾರ್ಟಿಸ್ ಮತ್ತು ಸೆಸೆಲಿಯಾ ಮಾರ್ಟಿಸ್ ಅವರ ಪುತ್ರ ಪಾದ್ರಿ ಫಾ. ಲಾರೆನ್ಸ್ ಮಾರ್ಟಿಸ್ (55) ನವೆಂಬರ್ 25 ರ ಬುಧವಾರ ಕೆನಡಾದಲ್ಲಿ ನಿಧನರಾದರು.

ಮೇ 1, 1992 ರಂದು ಅವರನ್ನು ಮಂಗಳೂರು ಪ್ರಾಂತ್ಯದ ಪಾದ್ರಿಯನ್ನಾಗಿ ನೇಮಿಸಲಾಗಿತ್ತು. ಬಳಿಕ ಅವರು ಉರ್ವದ ಭಾಲ್ಕಿಯ ಯೇಸು ನಿಲಯದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದರು. ನಂತರ ಅವರನ್ನು ಬಿಷಪ್ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.
ಅವರು ಅಮ್ಚಿ ಮಾಯ್ ಎಂಬ ಕೊಂಕಣಿ ಮಾಸಿಕದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಹಾಗೆಯೇ ಪಾಂಟಿಫಿಕಲ್ ಮಿಷನ್ ಸೊಸೈಟೀಸ್ನ ನಿರ್ದೇಶಕರೂ ಆಗಿದ್ದರು.
1998 ರಲ್ಲಿ ಅವರನ್ನು ಗಂಟಾಲಕಟ್ಟೆ ಪ್ರಾಂತ್ಯದ ಪಾದ್ರಿಯಾಗಿ ನೇಮಿಸಲಾಗುತ್ತು. ಎರಡು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ನಂತರ, ಅವರು ಮಂಗಳೂರಿನಿಂದ ಕೆನಡಾಕ್ಕೆ ತೆರಳಿದರು. ಅಲ್ಲಿ ಅವರು 20 ವರ್ಷಗಳ ಕಾಲ ವಿವಿಧ ಪ್ರಾಂತ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನವೆಂಬರ್ 30 ರ ಸೋಮವಾರ ಬೆಳಿಗ್ಗೆ 10.30 ಕ್ಕೆ ಕೆನಡಾದಲ್ಲಿ ನಡೆಯಲಿದೆ.