ಕಾಸರಗೋಡು, ನ. 27 (DaijiworldNews/MB) : ಮೂರು ವಾರಗಳ ಹಿಂದೆ ಬಂದ್ಯೋಡು ಅಡ್ಕದಲ್ಲಿ ನಡೆದ ಗುಂಡಿನ ದಾಳಿ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

ಬಂಧಿತರನ್ನು ಅಡ್ಕ ಬೈದಲದ ಭಾತಿಷಾ (33) ಮತ್ತು ಉಪ್ಪಳದ ಸಫಾದತ್ (23) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 31 ರಂದು ಬೆಳಿಗ್ಗೆ ಘಟನೆ ನಡೆದಿತ್ತು. ಎರಡು ತಂಡಗಳ ನಡುವೆ ಗುಂಡಿನ ದಾಳಿ, ವಾಹನಗಳನ್ನು ಹಾನಿಗೊಳಿಸಲಾಗಿತ್ತು.