ಮಂಗಳೂರು, ನ. 27 (DaijiworldNews/MB) : ಅಪಾರ್ಟ್ಮೆಂಟ್ ಒಂದರ ಕೌಂಪೌಂಡ್ನ ಮೇಲೆ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮತ್ತು ಭಜರಂಗದಳವು ನವೆಂಬರ್ 27 ಶುಕ್ರವಾರ ಮಲ್ಲಿಕಟ್ಟೆ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.


ವಿಎಚ್ಪಿ ಮತ್ತು ಭಜರಂಗದಳದವರು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಈ ಕೃತ್ಯವನ್ನು ಖಂಡಿಸಿದರು.
ಮಂಗಳೂರಿನಲ್ಲಿ ಲಷ್ಕರ್ -ಎ-ತೊಯ್ಬಾ ಭಯೋತ್ಪಾದಕರು ಇರುವುದನ್ನು ಈ ಗೋಡೆಬರಹವು ಸಾಬೀತುಪಡಿಸುತ್ತದೆ ಎಂದು ಹೇಳಿದ ಪ್ರತಿಭಟನಕಾರರು ಕೂಡಲೇ ಭಯೋತ್ಪಾದಕರನ್ನು ಬಂಧಿಸುವಂತೆ ಒತ್ತಾಯಿಸಿದರು.
"ಈ ಭಯೋತ್ಪಾದಕರನ್ನು ತಕ್ಷಣ ಬಂಧಿಸುವಂತೆ ನಾವು ಒತ್ತಾಯಿಸುತ್ತೇವೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.
ವಿಎಚ್ಪಿ ಮುಖಂಡರಾದ ಗೋಪಾಲ್ ಕುತ್ತಾರ್, ಶಿವಾನಂದ್ ಮೆಂಡನ್, ಪುನೀತ್ ಅತ್ತಾವರ ಮತ್ತು ಇತರರು ಉಪಸ್ಥಿತರಿದ್ದರು.