ಉಡುಪಿ, ನ. 28 (DaijiworldNews/HR): ಶುಕ್ರವಾರ ಉತ್ತನ ದ್ವಾದಶಿಯಂದು ಬೆಳಿಗ್ಗೆ ಶ್ರೀ ಕೃಷ್ಣ ಮಠದಲ್ಲಿ ಪ್ರಾರಂಭವಾದ ಮೂರು ದಿನಗಳ ತೆಪ್ಪೊತ್ಸವ ಮತ್ತು ಲಕ್ಷ ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದಾರೆ.















































ನವೆಂಬರ್ 27 ಶುಕ್ರವಾರ ಬೆಳಿಗ್ಗೆ, ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯಾ ತೀರ್ಥ ಸ್ವಾಮೀಜಿ ತುಳಸಿಗೆ ಪೂಜೆ ಅರ್ಪಿಸಿದರು. ಸಂಜೆ, ಮಠದ ಹಿರಿಯ ಮತ್ತು ಕಿರಿಯ ಸ್ವಾಮೀಗಳೆಲ್ಲರು ಇಲ್ಲಿನ ರಥ ಬೀದಿಯಲ್ಲಿ ಒಟ್ಟಿಗೆ ಸೇರಿ ದೀಪಗಳ ಹಬ್ಬವಾದ ಲಕ್ಷ ದೀಪೋತ್ಸವವನ್ನು ಆಚರಿಸಿದರು.
ರಥ ಬೀದಿಯಲ್ಲಿ ಮತ್ತು ಸುತ್ತಮುತ್ತ ಒಟ್ಟುಗೂಡಿದ ಸಾವಿರಾರು ಭಕ್ತರು ಎಣ್ಣೆಯಿಂದ ತುಂಬಿದ ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದಾರೆ.
ಶ್ರೀ ಕೃಷ್ಣ ಮಠದ ಕೆರೆಯನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಭಗವಂತನ ಉತ್ಸವ ಮೂರ್ತಿಯನ್ನು ಅಲಂಕರಿಸಿದ ತೆಪ್ಪದಲ್ಲಿ ಇರಿಸಿ ಕೆರೆಯ ಸುತ್ತಲೂ ಸಂಗೀತ ವಾದ್ಯಗಳೊಂದಿಗೆ ಕರೆದೊಯ್ಯಲಾಯಿತು, ಬಳಿಕ ಪಲಿಮಾರು ಕಿರಿಯ ಸ್ವಾಮೀಜಿ, ಶ್ರೀ ವಿದ್ಯಾರಾಜೇಶ್ವರ ತೀರ್ಥ, ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿದರು, ನಂತರ ಮಹಾ ಪೂಜೆಯನ್ನು ಅರ್ಪಿಸಲಾಯಿತು. ಶೀ ಕೃಷ್ಣನ ಹೆಸರನ್ನು ಜಪಿಸುತ್ತಾ ಭಕ್ತರು ರಥವನ್ನು ಎಳೆದರು.
ರಥಬೀದಿಯಲ್ಲಿ ಮಾತ್ರವಲ್ಲ, ನಗರದ ಇತರ ಪ್ರಮುಖ ಬೀದಿಗಳನ್ನು ಕೂಡ ದೀಪಗಳಿಂದ ಅಲಂಕರಿಸಲಾಗಿತ್ತು. ಉಡುಪಿ ಮೂರು ದಿನಗಳ ಕಾಲ ಸುಂದರವಾದ ದೀಪ ಅಲಂಕಾರ ಮತ್ತು ವಿಶೇಷ ಪೂಜೆಗಳಿಗೆ ಸಾಕ್ಷಿಯಾಗಿದೆ. ಉತ್ಸವದಲ್ಲಿ ದೂರದ ಊರುಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಸೋದೆ ಮಠದ ಶ್ರೀ ವಿಶ್ವ ವಲ್ಲಭ ತೀರ್ಥ ಸ್ವಾಮೀಜಿ ಮತ್ತು ಪುತ್ತಿಗೆ ಮಠದ ಶ್ರೀ ಸುಗುನೇಂದ್ರ ತೀರ್ಥ ಸ್ವಾಮೀಜಿ ಹೊರತುಪಡಿಸಿ ಉಳಿದ ಎಲ್ಲ ಸ್ವಾಮೀಜಿಗಳು ಉತ್ಸವದಲ್ಲಿ ಭಾಗವಹಿಸಿದ್ದರು.
ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯಾ ತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ಸ್ವಾಮೀಜಿ, ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉತ್ಸವದಲ್ಲಿ ಭಾಗವಹಿಸಿದ್ದರು.