ಉಡುಪಿ, ನ.28 (DaijiworldNews/PY): ಕಾಂಗ್ರೆಸ್ ಸಾಧ್ಯವಿದ್ದರೆ ಗೆಲ್ಲುವ ಅಭ್ಯರ್ಥಿಯನ್ನು ನಿಲ್ಲಿಸಲಿ ಎನ್ನುವ ಶೋಭಾ ಕರಂದ್ಲಾಜೆ ಸವಾಲಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ತಿರುಗೇಟು ನೀಡಿದ್ದು, "ಇದರಿಂದಲೇ ಬಿಜೆಪಿಯ ಮನೋವೃತ್ತಿ ಏನೆಂದು ಗೊತ್ತಾಗುತ್ತೆ. ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಖರೀದಿಸಿ ಸರಕಾರ ಮಾಡಿದ್ದಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.



ಶನಿವಾರ ಉಡುಪಿ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, "ಕೊರೊನಾ ಮಹಾಮಾರಿ ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸೋಂಕಿತರ ಬಗ್ಗೆ ಭಾರತ ವಿಶ್ವದಲ್ಲಿ ಎರಡನೇ ಸ್ಥಾನ ಮತ್ತು ಕರ್ನಾಟಕವು ಎರಡನೇ ಸ್ಥಾನ. ಈ ಸಂದರ್ಭದಲ್ಲಿ ತೊಂದರೆಗೆ ಒಳಪಟ್ಟವರ ಸಮಸ್ಯೆಯನ್ನು ಪರಿಹಾರ ಕ್ರಮ ತೆಗೆದುಕೊಂಡಿಲ್ಲ. ಪಕ್ಷದ ನಾಯಕರನ್ನು ಒಲಿಸಿಕೊಳ್ಳಲು ನಿಗಮದ ಸ್ಥಾಪನೆ ಸಂಪುಟ ವಿಸ್ತರಣೆ. ಮುಖ್ಯಮಂತ್ರಿಯವರ ಬದಲಾವಣೆ ಇದೇ ಜಂಜಾಟದಲ್ಲಿ ಬಿಜೆಪಿ ತೊಡಗಿದೆ. ಜನ ಸಾಮಾನ್ಯರ ಸಮಸ್ಯೆಗೆ ಕಿವುಡಾಗಿದ್ದಾರೆ. ಕಾಂಗ್ರೆಸ್ ಕೂಡ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದೆ. ಕಾರ್ಮಿಕ ಕಾಯ್ದೆ, ಭೂ ಮಸೂದೆ ಕಾಯ್ದೆ, ಬೆಲೆ ಏರಿಕೆಯಾಗಿದೆ. ಗ್ಯಾಸ್ ಸಬ್ಸಿಡಿ ತೆಗೆಯಲಾಗಿದೆ. ನಗರಸಭೆ ಪುರಸಭೆ ಸಿಮೆಂಟ್ ದಂಧೆ, ಮರದ ಧಂದೆ, ಮರಳು ದಂಧೆ ನಿರೀಕ್ಷಿತ ಅಭಿವೃದ್ದಿ ಕಾರ್ಯಕ್ರಮ ಆಗುತ್ತಿಲ್ಲ. ಸಿದ್ದರಾಮಯ್ಯನವರು ಕೊಡುತ್ತಿದ್ದ ಐದು ಲಕ್ಷ ಅನುದಾನವನ್ನು ಈಗ ಐದೈದು ಲಕ್ಷದಂತೆ ಹಂಚುತ್ತಿದ್ದಾರೆ. ಹಿಂದಿನ ಸರಕಾರದ ಕಾಲದಲ್ಲಿ ಮಾಡಿದ 94 ಸಿ ಹಕ್ಕು ಪತ್ರ ಹಂಚಿಕೆ ಇನ್ನು ಕೊಟ್ಟಿಲ್ಲ. ಹಲವಾರು ಕಡೆ ಜನ ರೊಚ್ಚಿಗೆದ್ದಿದ್ದಾರೆ" ಎಂದರು
"ಕಾಪು ಪುರಸಭೆ ಆಗುವ ಮೊದಲೂ ಒಂದು ಬಾರಿಯೂ ಕಾಪುವಿನತ್ತ ಸುಳಿದಿಲ್ಲ. ಆದರೆ, ಕಾಪು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗುವಾಗ ಬಿಜೆಪಿ ಬಹಮತಕ್ಕಾಗಿಯೇ ಓಟು ಹಾಕಲು ಓಡೋಡಿ ಬಂದಿದ್ದಾರೆ. ಒಂದೂ ಅವರ ಹಂತದ ಅಭಿವೃದ್ದಿ ಕಾರ್ಯಕ್ರಮ ಕಾಪುವಿನಲ್ಲಿ ಆದದ್ದಿಲ್ಲ. ಬಿಜೆಪಿಗರಿಗೆ ಖರೀದಿಯ ಮೇಲೆನೆ ಹೆಚ್ಚು ವಿಶ್ವಾಸ ಇದೆ ಕುದುರೆ ವ್ಯಾಪಾರ ಮಾಡುವುದು, ಆಪರೇಷನ್ ಕಮಲ ನಡೆಸುವುದೇ ಆಸಕ್ತಿ ಇರುವಂತಿದೆ" ಎಂದು ತಿಳಿಸಿದರು.
ನಿನ್ನೆ ಬಿಜೆಪಿ ಸಮಾವೇಶದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ ಹೇಳಿದ ಹೇಳಿಯಂತೆ, ಕಾಂಗ್ರೆಸ್ ಅಧಿಕಾರ ಮಾಡಿದ್ದೇ ಡ್ರಗ್ ಮಾಫಿಯಾದಿಂದ ಎಂಬುದಕ್ಕೆ ತಿರುಗೇಟು ನೀಡಿದ ಸೊರಕೆ, "ಬಿಜೆಪಿ ಸರಕಾರಕ್ಕೆ ಬಂದು ಒಂದೂವರೆ ವರ್ಷವಾಯ್ತು . ಏನು ಅಭಿವೃದ್ದಿ ಮಾಡಿದ್ದರು? ಕತ್ತೆ ಕಾಯ್ತಾ ಇದ್ರಾ?. ಸಿದ್ದರಾಮಯ್ಯನವರ ಸರಕಾರದ ಕಾಲದಲ್ಲಿ ಡ್ರಗ್ ಇದ್ದಿದ್ರೆ, ಮೈತ್ರಿ ಸರಕಾರ ಬಂದಾಗ ಎಸೆಂಬ್ಲಿಯಲ್ಲಿ ಏಕೆ ಒಂದು ಶಬ್ದ ಮಾತನಾಡಿಲ್ಲ. ಪಂಚಾಯತ್ ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸ್ತಾ ಇದ್ದಾರೆ. ಎಲ್ಲಾ ಅಪವಾದಗಳನ್ನು ಹಿಂದಿನ ಸರಕಾರದ ಮೇಲೆ ಹಾಕ್ತ ಇದ್ದಾರೆ ಯಾಕೆ? ಎಂದು ಪ್ರಶ್ನಿಸಿದರು.