ಮಂಗಳೂರು, ಜೂ08: ನಡೆದಾಡಲು ಶಕ್ತಿ ಇಲ್ಲದೇ ತಾಯಿಯ ಆಸರೆಯಲ್ಲಿ ಬೆಳೆಯುತ್ತಿರುವ 6 ವರ್ಷದ ಪುಟ್ಟ ಕಂದಮ್ಮನಿಗೆ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ವತಿಯಿಂದ ನೆರವು ನೀಡಲಾಗಿದೆ.
ಆರು ವರ್ಷದ ತೇಜಸ್ವಿನಿ ಇತರ ಮಕ್ಕಳಂತೆ ಆಟವಾಡಿಕೊಂಡಿರಬೇಕಾದ ಪುಟ್ಟ ಕಂದಮ್ಮ. ಆದರೆ ಇಂದು ನಡೆದಾಡಲೂ ಶಕ್ತಿಯಿಲ್ಲದೆ ತಾಯಿ ಆಸರೆಯಲ್ಲಿಯೇ ಪ್ರತಿ ಕ್ಷಣ ಇರಬೇಕಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ಬಾಲಕಿಯ ಪೋಷಕರು ಮುಂದಾಗಿದ್ದು, 3 ಲಕ್ಷ ರೂ ವೆಚ್ಚವಿದೆ. ಹೀಗಾಗಿ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ವತಿಯಿಂದ ಏಕ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿರುವ ಸುನಿಲ್ ಶೋಭಾ ದಂಪತಿಯ ಪುತ್ರಿಯ ಚಿಕಿತ್ಸೆಗಾಗಿ 50 ಸಾವಿರ ರೂಪಾಯಿ ಧನ ಸಹಾಯ ವಿತರಿಸಲಾಗಿದೆ.
ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ವತಿಯಿಂದ ಧನ ಸಹಾಯ ವಿತರಿಸಿ ವೇದವ್ಯಾಸ್ ಕಾಮತ್ ಮಾತನಾಡಿ, ಸಂಘಟನೆಗೆ ಅಭಿನಂದಿಸಿದ್ದಾರೆ. ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬದುಕಬೇಕಾದ ನಾವು ಇತರರಿಗೂ ಕಷ್ಟದ ಸಮಯದಲ್ಲಿ ಸ್ಪಂದನೆ, ಸಹಾಯ ಒದಗಿಸಿದಾಗ ಬದುಕು ಸಾರ್ಥಕ ಎನಿಸುತ್ತದೆ. ಈ ನಿಟ್ಟಿನಲ್ಲಿ ಬಿರುವೆರ್ ಕುಡ್ಲ ಕಳೆದ ಹಲವು ವರ್ಷಗಳಿಂದ ಬಡ ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಇಂದು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ದುರ್ಬಲರಿದ್ದಾರೆ. ಇವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ. ಬಿರುವೆರ್ ಕುಡ್ಲ ಕಳೆದ ಮೂರು ವರ್ಷಗಳಲ್ಲಿ ಜಾತಿ ಮತ ನೋಡದೆ ಎಲ್ಲರಿಗೂ ಸಹಾಯ ಹಸ್ತ ಚಾಚಿದೆ. ಸರಿಸುಮಾರು 76 ಲಕ್ಷ ರೂ.ನಷ್ಟು ಧನ ಸಹಾಯ ವಿತರಿಸಿದ್ದು, ಇದು ಸಣ್ಣ ಸಾಧನೆಯಲ್ಲ. ಇದು ಬಹು ಪರಿಶ್ರಮದ ಕೆಲಸ. ಇವರ ಜೊತೆ ಇರುವ ದಾನಿಗಳು, ಬಿರುವೆರ್ ಕುಡ್ಲ ಸಂಘಟನೆಯ ಸದಸ್ಯರು ಅಭಿನಂದನಾರ್ಹರು ಎಂದು ತಿಳಿಸಿದರು.
ಐ.ಡಿ.ಎ ರಾಜ್ಯ ಸಮಿತಿ ಪ್ರತಿನಿಧಿ ಸದಸ್ಯ ಡಾ.ಶಿವಶರಣ್ ಶೆಟ್ಟಿ, ರಣ್ದೀಪ್ ಕಾಂಚನ್, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ, ಪ್ರಮೋದ್ ಬಳ್ಳಾಲ್ ಬಾಗ್, ಉದ್ಯಮಿ ಸದಾನಂದ ಪೂಜಾರಿ, ಚಾರ್ವಾಕ ಮಹೇಶ್ ಶೆಟ್ಟಿ ಮುಂಬೈ, ವೆಂಕಟೇಶ್ ಭಂಡಾರಿ, ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ ಬಾಗ್, ಅಭಿಷೇಕ್ ಅಮೀನ್, ರಾಧಾಕೃಷ್ಣ ಕದ್ರಿ, ರಾಕೇಶ್ ಕೋಟ್ಯಾನ್, ತುಕಾರಾಮ್ ಶೆಟ್ಟಿ ಎಕ್ಕೂರು, ಮನೋಜ್ ಸರಿಪಲ್ಲ, ವಿನ್ನು ಶೆಟ್ಟಿ ತಲಪಾಡಿ, ಲೋಕೇಶ್ ಶೆಟ್ಟಿ, ಲತೇಶ್ ಪೂಜಾರಿ ಬಳ್ಳಾಲ್ ಬಾಗ್, ಸುಹಾನ್ ಪೂಜಾರಿ, ರಾಕೇಶ್ ಚಿಲಿಂಬಿ, ಕಿಶೋರ್ ಬಾಬು ಕೋಡಿಕಲ್, ಅನಿಲ್ ಬೋಳೂರು , ಮಹೇಶ್ ಅಮೀನ್ ಅಶೋಕ್ ನಗರ, ದಿನಿಲ್ ಪೂಜಾರಿ ಬಳ್ಳಾಲ್ ಬಾಗ್, ರಿನಿತ್ ರಾಜ್ ಅಶೋಕ್ ನಗರ, ಸುನೀಲ್ ಶೆಟ್ಟಿ,ರತನ್, ರೋಶನ್ ಪೂಜಾರಿ ಬಳ್ಳಾಲ್ ಬಾಗ್, ರಾಜೇಶ್ ಪೂಜಾರಿ, ಯೋಗೀಶ್ ಪೂಜಾರಿ ಶಕ್ತಿನಗರ, ಯತೀಶ್ ಬಳ್ಳಾಲ್ ಬಾಗ್, ವಿಘ್ನೇಶ್ ಚಿಲಿಂಬಿ, ದೀಪಕ್ ಪೂಜಾರಿ, ಮನೀಶ್ ಚಿಲಿಂಬಿ, ಲೋಹಿತ್ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.