ಕಾರ್ಕಳ,ನ. 28 (DaijiworldNews/HR): ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ಹತ್ತಿರ ಮೇಯಲು ತೆರಳಿದ್ದಾಗ ಜೆರ್ಸಿ ದನವೊಂದು ಆಕಸ್ಮಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದು ಗಾಯಗೊಂಡಿದೆ.



ಮಾಹಿತಿ ತಿಳಿದು ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ದೌಡಾಯಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿ ಜೆರ್ಸಿದನವನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಠಾಣಾಧಿಕಾರಿ ಬಿ.ಎಂ ಸಂಜೀವ, ದಾಪೆದರ್ಗಳಾದ ಹೊನ್ನಯ್ಯ, ರೂಪೇಶ್, ಸಿಬಂದಿಗಳಾದ ಸುರೇಶ್, ಜಯ ಮೂಲ್ಯ, ಸುಜಯ್, ಸಚಿನ್, ಗೃಹರಕ್ಷಕ ದಳದ ಮನ್ಮಥ ಪಾಲ್ಗೊಂಡಿದ್ದರು.