ಕುಂದಾಪುರ, ನ. 29 (DaijiworldNews/MB) : ನವೆಂಬರ್ 28 ರ ಶನಿವಾರದಂದು ಕೋಟಾದ ಕೃಷ್ಣ ಭವನ ಹೋಟೆಲ್ ಬಳಿಯ ಎನ್ಎಚ್ 66 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದರೆ ಇನ್ನೋರ್ವ ಯುವತಿ ಗಂಭೀರ ಗಾಯಗೊಂಡಿದ್ದಾರೆ.


ಮೃತ ಯುವತಿಯನ್ನು ಶ್ರೇಯಾ (24) ಹಾಗೂ ಗಂಭೀರ ಗಾಯಗೊಂಡ ಯುವತಿಯನ್ನು ಪೃಥ್ವಿ ಎಂದು ಗುರುತಿಸಲಾಗಿದೆ
ಇಬ್ಬರು ಯುವತಿಯರು ತಮ್ಮ ದ್ವಿಚಕ್ರ ವಾಹನದಲ್ಲಿ ಕುಂದಾಪುರದಿಂದ ಬ್ರಹ್ಮಾವರ ಕಡೆಗೆ ಸಂಚರಿಸುತ್ತಿದ್ದಾರೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಶ್ರೇಯಾ ಸಾವನ್ನಪ್ಪಿದ್ದು ಪೃಥ್ವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೃಥ್ವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಲು ಯತ್ನಿಸಿದ್ದು ಜೀವನ್ ಮಿತ್ರ ಆಂಬ್ಯುಲೆನ್ಸ್ ಮಾಲೀಕ ನಾಗರಾಜ್ ಪುತ್ರನ್ ಅವರ ಶೀಘ್ರ ಕಾರ್ಯಪ್ರವೃತ್ತಿಯಿಂದ ಸಾಸ್ತಾನ್ ಟೋಲ್ ಗೇಟ್ನಲ್ಲಿ ಕಾರನ್ನು ತಡೆಹಿಡಿದು ಕೋಟಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ಈ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.