ಮಂಗಳೂರು, ನ. 29 (DaijiworldNews/MB) : ಮಂಗಳೂರಿನ ಅಪಾರ್ಟ್ಮೆಂಟ್ ಒಂದರ ಕೌಂಪೌಂಡ್ನ ಮೇಲೆ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದ ಘಟನೆ ಇತ್ತೀಚೆಗೆ ನಡೆದಿದ್ದು ನಗರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಏತನ್ಮಧ್ಯೆ ನಗರದ ಕೋರ್ಟ್ ರೋಡ್ನಲ್ಲಿ ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಕಾಣಿಸಿಕೊಂಡಿದೆ.



ನಗರದ ಕೋರ್ಟ್ ರೋಡ್ನಲ್ಲಿ ಕೋರ್ಟ್ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್ನ ಹಳೇ ಪೊಲೀಸ್ ಔಟ್ ಪೋಸ್ಟ್ನ ಗೋಡೆಯ ಮೇಲೆ ಕಿಡಿಗೇಡಿಗಳು ಉರ್ದು ಭಾಷೆಯಲ್ಲಿ 'Gustuk e Rasool ek hi saza sar tan say juda' ಅಂದರೆ, "ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು" ಎಂದು ಬರೆದಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಸರ್ಕ್ಯೂಟ್ ಹೌಸ್ನ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಒಂದರ ಕೌಂಪೌಂಡ್ನ ಮೇಲೆ "Do not force us to invite Lashkar-e-Toiba and Taliban to Deal with Sanghis and Manvedis" ಎಂದು ಉಗ್ರರ ಪರವಾಗಿ ಕಿಡಿಗೇಡಿಗಳು ಬರೆದಿದ್ದರು. ಅಷ್ಟೇ ಅಲ್ಲದೇ ಹ್ಯಾಷ್ ಟ್ಯಾಗ್ ಹಾಕಿ, "ಲಷ್ಕರ್ ಜಿಂದಾಬಾದ್" ಎಂದು ಬರೆಯಲಾಗಿತ್ತು. ಬಳಿಕ ಕದ್ರಿ ಪೊಲೀಸರು ವಿವಾದಿತ ಬರಹದ ಮೇಲೆ ಪೈಂಟ್ ಬಳಿದಿದ್ದಾರೆ.