ಕಾರ್ಕಳ, ನ.29 (DaijiworldNews/PY): ನಗರದ ಕರಿಯಕಲ್ಲುಎಂಬಲ್ಲಿ ಪುರಸಭೆಯ ಡಂಪಿಂಗ್ ಯಾರ್ಡ್ನಲ್ಲಿ ರವಿವಾರ ಅಗ್ನಿ ಅನಾಹುತ ಘಟನೆ ಸಂಭವಿಸಿದೆ.


ಅಗ್ನಿಶಾಮಕ ದಳ ಸಿಬ್ಬಂದಿಯರು ಸ್ಥಳಕ್ಕೆ ಆಗಮಿಸಿದ್ದು, ಸುಮಾರು ಒಂದೂವರೆ ಗಂಟೆಯ ಸತತ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ.
ಕಾರ್ಯಾಚಣೆಯಲ್ಲಿ ಅಗ್ನಿಶಾಮದಳದ ಠಾಣಾಧಿಕಾರಿ ಬಿ ಎಂ ಸಂಜೀವ , ದಪೆದಾರ್ಗಳಾದ ಉದಯ್ ಕುಮಾರ್ ಹೆಗಡೆ, ರೂಪೇಶ್, ಸಿಬ್ಬಂದಿಗಳಾದ ಮೊಹಮ್ಮದ್ ರಫೀಕ್, ಕಲ್ಲಪ್ಪ, ಗೃಹರಕ್ಷಕ ದಳದ ಸಂದೀಪ್ ಪಾಲ್ಗೊಂಡಿದ್ದರು.