ಉಡುಪಿ, ನ. 29 (DaijiworldNews/SM): ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಬೆಂಬಲಿಗರು ಗೈರು ಹಾಜರಾಗುವ ಮೂಲಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
.jpg)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಉಡುಪಿಯಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಮಾವೇಶದಲ್ಲಿ ಗೈರು ಹಾಜರಾಗಿದ್ದರು. ಅಲ್ಲದೆ, ಜಿಲ್ಲಾ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಕೂಡ ಮಧ್ವರಾಜ್ ಕಾಣಿಸಿಕೊಂಡಿಲ್ಲ.
ಈ ನಡುವೆ ಪ್ರಮೋದ್ ಬೆಂಬಲಿಗರಿಂದ ಶಕ್ತಿ ಪ್ರದರ್ಶನ ಪ್ರಯತ್ನ ಕೂಡ ನಡೆದಿದೆ. ಸಮಾವೇಶ ಸ್ಥಳದ ಆವರಣದಲ್ಲಿ ಶಕ್ತಿ ಪ್ರದರ್ಶನ ಯತ್ನ ಮಾಡಿದ್ದಾರೆ. ಶಾಮಿಯಾನ ಅಳವಡಿಸಿ ಮೌನ ಪ್ರತಿಭಟನೆಗೆ ಮುಂದಾಗಿದ್ದರು. ಬಳಿಕ ಡಿಕೆಶಿ ಆಗಮಿಸುತ್ತಿದ್ದಂತೆ ಜೈಕಾರ ಕೂಗಿ ಸಭಾಂಗಣದತ್ತ ಪ್ರಮೋದ್ ಬೆಂಬಲಿಗರು ತೆರಳಿದರು.