ಉಡುಪಿ, ನ. 29 (DaijiworldNews/SM): ಉಡುಪಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಬೆಂಬಲಿಗರು ಗರಂ ಆಗಿದ್ದು, ಮಧ್ವರಾಜ್ ಗೆ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಬಿಟ್ಟು ಹೋಗುವವರನ್ನು ಕಳುಹಿಸಿಕೊಡುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮನೆಯ ಚೌಕಟ್ಟಿಲ್ಲಿ ಭಿನ್ನಾಭಿಪ್ರಾಯ ಇರುತ್ತದೆ ನಿಜ. ನನ್ನಿಂದಲೇ ಪಕ್ಷ ಅಂತ ಬ್ಲಾಕ್ ಮೇಲ್ ಮಾಡಬಾರದು. ಆ ರೀತಿ ಬ್ಲಾಕ್ಮೇಲ್ ಮಾಡಬಹುದು ಅಂತ ಭಾವಿಸಿದ್ರೆ ಅದು ಭ್ರಮೆ. ಯಾರಾದ್ರೂ ಪಕ್ಷ ಬಿಟ್ಟು ಹೋಗುವವರಿದ್ರೆ ಕಳುಸಿಕೊಡೋಣ. ಅವರನ್ನು ಗೌರವಯುತವಾಗಿ ಕಳುಹಿಸಿಕೊಡೋಣ ಎಂದರು.
ಪಕ್ಷದಲ್ಲಿ ಯಾರೂ ಶಾಶ್ವತವಲ್ಲ, ಕಾಂಗ್ರೇಸ್ನಲ್ಲಿ ಇರೋದು ಸೌಭಾಗ್ಯ. ಮೊದಲು ಶಿಸ್ತು ಬೇಕು, ಅಧಿಕಾರ ಎಲ್ಲರಿಗೂ ಸಿಗುತ್ತೆ. ಜಿಲ್ಲೆಯಲ್ಲಿ ಒಬ್ರೂ ಶಾಸಕರಿಲ್ಲ ಕಾರ್ಯಕರ್ತರು ಏನು ಮಾಡ್ಬೇಕು? ಎಲ್ಲಿ ತ್ಯಾಗ, ಶ್ರಮ ಇಲ್ಲವೋ ಅಲ್ಲಿ ಫಲ ಇಲ್ಲ ಎಂದು ಡಿಕೆಶಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.