ಮಂಗಳೂರು, ನ. 29 (DaijiworldNews/SM): ರಾಜ್ಯ ಸರಕಾರದ ವಿರುದ್ಧ ಖಾದರ್ ವಾಗ್ದಾಳಿ ನಡೆಸಿದ್ದು, ಬಿಜೆಪಿ ಸರಕಾರ ಕೋಮ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಕಣ್ಣೀರು ಒರೆಸುವ ಕಾರ್ಯ ಸರಕಾರ ಮಾಡುತ್ತಿಲ್ಲ. ಕನಿಷ್ಠ ರೇಷನ್ ಕಾರ್ಡ್ ಕೊಡುವ ವ್ಯವಸ್ಥೆ ಕೂಡ ಮಾಡಿಲ್ಲ. ಸತತ ಮನವಿ ಮಾಡಿದರೂ ಸರಕಾರ ಸ್ಪಂದಿಸಿಲ್ಲ. ನಾನು ಆಹಾರ ಸಚಿವರಾಗಿದ್ದ ಸಂದರ್ಭ ಹಲವು ಯೋಜನೆ ಕೈಗೊಂಡಿದ್ದೆ. ಆದರೆ, ಇಂದು ಯಾವುದೇ ಕಾರ್ಯ ಯೋಜನೆಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪಿಂಚಣಿ ಹಣ ಬರದೆ ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಪಿಂಚಣಿ ಬರದಿರುವುದರಿಂದ ಪ್ರತಿನಿತ್ಯ ಫೋನ್ ಮೂಲಕ ಗೋಲಾಡುತ್ತಿದ್ದಾರೆ ಎಂದರು. ಇನ್ನು ಪ್ರವಾಹದಿಂದಲೂ ಜನರು ಸಂಕಷ್ಟ ಎದುರಾಗಿದೆ. ಸರಕಾರ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.