ಉಪ್ಪಿನಂಗಡಿ, ನ. 29 (DaijiworldNews/SM): ಇಲ್ಲಿನ ಕಲ್ಲೇರಿ ಸಮೀಪ ಬೈಕ್ ಹಾಗೂ ಪಿಕ್ ಅಪ್ ವಾಹನ ನಡುವಿನ ಅಪಘಾತದಲ್ಲಿ ಸವಾರರಿಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.



ಮೃತಪಟ್ಟವರು ಬೈಕ್ ಸವಾರರಾಗಿದ್ದು, ಉರುವಾಲು ನಿವಾಸಿ ಕೃಷ್ಣ ಶೆಟ್ಟಿ ಹಾಗೂ ಕಣಿಯೂರು ನಿವಾಸಿ ದಯಾನಂದ ಎಂದು ಗುರಿತಿಸಲಾಗಿದೆ. ಅತಿಯಾದ ವೇಗದಲ್ಲಿ ಬಂದ ಪಿಕಪ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ವಾಹನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಾಗಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.