ಉಡುಪಿ, ನ. 30 (DaijiworldNews/MB) : ''ಚುನಾವಣಾ ನೀತಿ ಸಂಹಿತೆ ಸೋಮವಾರದಿಂದ ಜಾರಿಗೊಳಿಸಲಾಗಿದ್ದು, ಅದು 2020 ರ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತದೆ'' ಎಂದು ನವೆಂಬರ್ 30 ರ ಸೋಮವಾರ ಮಣಿಪಾಲದಲ್ಲಿನ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಹೇಳಿದರು.

"ಜಿಲ್ಲೆಯ ಒಟ್ಟು 154 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯಲಿದೆ. ಏಳು ತಾಲೂಕು ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆ ಉಡುಪಿಯ 16 ಪಂಚಾಯಿತಿಗಳಲ್ಲಿ, ಹೆಬ್ರಿಯ 9 ಪಂಚಾಯಿತಿಗಳು, ಬ್ರಹ್ಮಾವರದ 27 ಪಂಚಾಯಿತಿಗಳು, ಬೈಂದೂರಿನಲ್ಲಿ 15 ಪಂಚಾಯಿತಿಗಳಲ್ಲಿ ನಡೆಯಲಿದೆ. ಎರಡನೇ ಹಂತದ ಚುನಾವಣೆ ಕುಂದಾಪುರದ 44 ಪಂಚಾಯಿತಿಗಳು, ಕಾರ್ಕಳದ 27 ಪಂಚಾಯಿತಿಗಳು ಮತ್ತು ಕಾಪುವಿನ 16 ಪಂಚಾಯಿತಿಗಳಲ್ಲಿ ನಡೆಯಲಿದೆ. ಒಟ್ಟು 87 ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯಲಿದೆ'' ಎಂದು ತಿಳಿಸಿದರು.
ಮೂಲ ಮತದಾನ ಕೇಂದ್ರಗಳು 890, ಸಹಾಯಕ ಬೂತ್ಗಳು 282 ಮತ್ತು ಒಟ್ಟು ಮತದಾನ ಕೇಂದ್ರಗಳು 1172 ಇದೆ. ಒಟ್ಟು ಮಹಿಳಾ ಮತದಾರರ ಸಂಖ್ಯೆ 4,12,887, ಪುರುಷ ಮತದಾರರು ಸಂಖ್ಯೆ 3,82,785 ಹಾಗೂ ಇತರರು 9 ಮಂದಿ ಇದ್ದಾರೆ. ಒಟ್ಟು 7,95,681 ಮತದಾರರು ಮತ ಚಲಾಯಿಸಲಿದ್ದಾರೆ.
''ಉಡುಪಿ ಜಿಲ್ಲಾಡಳಿತವು ಎಲ್ಲಾ ಬೂತ್ಗಳಲ್ಲಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿದೆ'' ಎಂದು ಜಿಲ್ಲಾಧಿಕಾರಿ ಹೇಳಿದರು.
''ಮತದಾರರ ಪಟ್ಟಿಯೂ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಾವು ಅಧಿಕಾರಿಗಳನ್ನು ನೇಮಿಸುತ್ತೇವೆ'' ಎಂದು ತಿಳಿಸಿದರು.