ಕಾಸರಗೋಡು, ನ.30 (DaijiworldNews/PY): ಜಿಲ್ಲೆಯಲ್ಲಿ ಸೋಮವಾರ 86 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಸೋಮವಾರ ಕೊರೊನಾ ದೃಢಪಟ್ಟ 86 ಮಂದಿಯ ಪೈಕಿ 76 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಈ ನಡುವೆ ಸೋಮವಾರ 82 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1,087 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಕೊರೊನಾ ಸೋಂಕಿಗೆ ಸೋಮವಾರ ಓರ್ವ ಮೃತಪಟ್ಟಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 233ಕ್ಕೇರಿದೆ. 7,995 ಮಂದಿ ನಿಗಾದಲ್ಲಿದ್ದಾರೆ.