ಕಾಸರಗೋಡು, ನ. 30 (DaijiworldNews/SM): ಮೊಬೈಲ್ ಟವರ್ ಮೇಲೇರಿ ವೃದ್ಧರೋರ್ವರು ಆತ್ಮಹತ್ಯೆ ಬೆದರಿಕೆಯೊಡ್ಡಿದ ಘಟನೆ ಇಂದು ಬೆಳಿಗ್ಗೆ ಬದಿಯಡ್ಕದಲ್ಲಿ ನಡೆದಿದೆ .





ನಾರಂಪಾಡಿ ನೆಲ್ಯಡ್ಕದ ಮೋಹನ್ ದಾಸ್ ಎಂಬವರು ಬೆಳಿಗ್ಗೆ ಬದಿಯಡ್ಕ ಪೇಟೆಯಲ್ಲಿನ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳಕ್ಕೆ ತಲುಪಿದ ಪೊಲೀಸರು ಹಾಗೂ ಕಂದಾಯ ಅಧಿಕಾರಿ ಕೆಳಗಿಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಗಂಟೆಗಳ ಕಾಲ ಪೊಲೀಸ್, ಅಂಗ್ನಿಶಾಮಕ ದಳ ಹಾಗೂ ಕಂದಾಯ ಅಧಿಕಾರಿಗಳನ್ನು ಸುಸ್ತಾಗಿಸುವಂತೆ ಮಾಡಿತು. ಕ್ಯಾನ್ ನಲ್ಲಿ ಡೀಸೆಲ್ ಸಹಿತ ಮೇಲೇರಿದ್ದು, ಕೊನೆಗೆ ಜಿಲ್ಲಾಧಿಕಾರಿಯವರ ಜೊತೆ ಮಾತುಕತೆ ನಡೆಸುವ ಅನುಮತಿ ನೀಡುವ ಭರವಸೆ ನೀಡಿದ ಹಿನ್ನಲೆಯಲ್ಲಿ ಮೋಹನ್ ದಾಸ್ ಕೆಳಗಿಳಿದರು.
ಎರಡು ವರ್ಷಗಳ ಹಿಂದೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಆವರಣದ ಟವರ್ ಏರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದರು. ಮೋಹನ್ ದಾಸ್ ರವರ ಸ್ಥಳವೊಂದು ಕಂದಾಯ ಅಧಿಕಾರಿಗಳು ತಾಂತ್ರಿಕ ಕಾರಣವೊಡ್ಡಿ ಜಪ್ತಿ ನಡೆಸಿದ್ದು, ಇದನ್ನು ಪಡೆಯಲು ಮೋಹನ್ ದಾಸ್ ಹಲವು ಬಾರಿ ಕಚೇರಿಗಳಿಗೆ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತು ಮೋಹನ್ ದಾಸ್ ಟವರ್ ಹತ್ತಿ ಪ್ರತಿಭಟನೆಗೆ ಮುಂದಾಗಿದ್ದಾರೆ.