ಮಂಗಳೂರು, ಡಿ.01 (DaijiworldNews/MB) : ಬೋಳಾರದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಆಳಸಮುದ್ರದಲ್ಲಿ ಮಗುಚಿಬಿದ್ದಿದ್ದು ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.

ಸೋಮವಾರ ನಸುಕಿನ ಜಾವ ಬೋಳಾರದ ಶ್ರೀ ರಕ್ಷಾ ಮೀನುಗಾರಿಕಾ ಬೋಟ್ನಲ್ಲಿ 22 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು ರಾತ್ರಿ ವಾಪಾಸ್ ಬರಬೇಕಾಗಿತ್ತು. ಆದರೆ ಉಳ್ಳಾಲದ ಪಶ್ಚಿಮ ಭಾಗದ ಹಲವು ನಾಟಿಕಲ್ ಮೈಲ್ ದೂರದಲ್ಲಿ ದೋಣಿ ಮಗುಚಿ ಬಿದ್ದಿದೆ.
ಇತರೆ ಮೀನುಗಾರಿಕಾ ಬೋಟ್ನವರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು 14 ಮಂದಿ ಡೆಂಗೀ ಮೂಲಕ ದಡ ಸೇರುತ್ತಿದ್ದರೆ 6 ಮಂದಿ ನಾಪತ್ತೆಯಾಗಿದ್ದಾರೆ.
ಮೀನಿನ ಸಂಗ್ರಹ ಅಧಿಕವಾದ ಹಾಗೂ ಭಾರೀ ಗಾಳಿ ಬೀಸಿದ ಪರಿಣಾಮ ಈ ದೋಣಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.