ಉಡುಪಿ, ಡಿ.01 (DaijiworldNews/MB) : ನವೆಂಬರ್ 30 ರ ಸೋಮವಾರ ತಡರಾತ್ರಿ, ಮಣಿಪಾಲ ಬಳಿಯ ದುಗ್ಲಿ ಪದವಿನಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಇಬ್ಬರು ಯುವಕರ ಸಮಯಪ್ರಜ್ಞೆಯಿಂದಾಗಿ ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಯಾಗಿದೆ.

ಸೋಮವಾರ ರಾತ್ರಿ 10.30 ರ ಸುಮಾರಿಗೆ ಮಣಿಪಾಲ - ಅಲೆವೂರು ರಸ್ತೆಯ ದುಗ್ಲಿ ಪದವಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಸಾಕಷ್ಟು ಜನಸಂಖ್ಯೆಯನ್ನು ಹೊಂದಿರುವ ವಸತಿ ಪ್ರದೇಶವಾಗಿದೆ.
ಈ ಸಂದರ್ಭದಲ್ಲಿ ತಮ್ಮ ಬೈಕ್ನಲ್ಲಿ ಆ ರಸ್ತೆಯಲ್ಲಿ ಚಲಿಸುತ್ತಿದ್ದ ಅಲೆವೂರಿನ ಜಲೇಶ್ ಶೆಟ್ಟಿ ಮತ್ತು ಕುಕ್ಕಿಕಟ್ಟೆಯ ನವೀನ್ ಶೇರಿಗಾರ್ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ನೋಡಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ ಯುವಕರು, ಮಲಗಿದ್ದ ಸ್ಥಳೀಯರನ್ನು ಎಬ್ಬಿಸಿ ಅಗ್ನಿ ನಂದಿಸಲು ಸಹಾಯ ಮಾಡಿದರು.
ಈ ಇಬ್ಬರು ಯುವಕರ ಸಮಯಕ್ಕೆ ಸರಿಯಾದ ಸಹಾಯದಿಂದಾಗಿ ಅನಾಹುತ ತಪ್ಪಿದೆ. ಇಲ್ಲದಿದ್ದಲ್ಲಿ ಭಾರೀ ಪ್ರಮಾಣದ ನಷ್ಟವಾಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ.