ಮಂಗಳೂರು, ಡಿ.01 (DaijiworldNews/PY): ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ(ರಿ) ಕೇಂದ್ರೀಯ ಸಮಿತಿಯ ವತಿಯಿಂದ ಅನಾರೋಗ್ಯ ಕುಟುಂಬಕ್ಕೆ ಧನ ಸಹಾಯ ನೀಡಲಾಯಿತು.







ಸೊಂಟದ ಮೂಳೆ ಮುರಿತ ಹಾಗೂ ಒಂದು ಕಾಲು ಕಳೆದುಕೊಂಡಿರುವ ನಾಗುರಿ ಮಜಾಲ್ ನಿವಾಸಿ ಲೋಕೇಶ್, ಕಿಡ್ನಿ ಮೂತ್ರ ಪಿಂಡ ವೈಫಲ್ಯ ಎರಡೂ ಕಾಲು ಕಳೆದುಕೊಂಡಿರುವ ಬಜಾಲ್ ನಿವಾಸಿ ಪುರಂದರ, ಮೂತ್ರ ಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಪಿಲಿಕುಳ ಎದುರು ಪದವು ನಿವಾಸಿ ಬದ್ರುದ್ದೀನ್ ಇವರಿಗೆ 50 ಸಾವಿರ ಧನ ಸಹಾಯ ನೀಡಿದ್ದಾರೆ.
ಅನಾರೋಗ್ಯ ಪೀಡಿತ ತಲಾ 3 ಕುಟುಂಬಗಳಿಗೆ 1.5 ಲಕ್ಷದ ಚೆಕ್ ವಿತರಣೆಯನ್ನು, ಮಂಗಳೂರು ಉತ್ತರದ ಜನಪ್ರಿಯ ಶಾಸಕ ಡಾ.ಭರತ್ ಶೆಟ್ಟಿ ವೈ ಮತ್ತು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ಮಹಾ ನಗರ ಪಾಲಿಕೆ ಮಹಾ ಪೌರ ದಿವಾಕರ್ ಪಾಂಡೇಶ್ವರ್ ಬಿರುವೆರ್ ಕುಡ್ಲ(ರಿ) ಸಂಸ್ಥೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್ ಭಾಗ್, ಅಧ್ಯಕ್ಷ ರಾಕೇಶ್ ಪೂಜಾರಿಯವರ ಉಪಸ್ಥಿತಿಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್ ಸಾಯಿ ರಾಮ್,ಮೂಡ ಅಧ್ಯಕ್ಷ ರವಿ ಶಂಕರ್ ಮಿಜಾರ್,ರವೀಂದ್ರ ನಿಕಮ್, ಲತೀಶ್ ಬಲ್ಲಾಳ್ ಭಾಗ್, ಬಾಬಾ ಅಲಂಕಾರ್, ಸೂರಜ್ ಕಲ್ಯ, ಲಿಖಿತ್ ಕೋಟ್ಯಾನ್, ಲೋಹಿತ್ ಗಟ್ಟಿ, ರೆನಿತ್ ರಾಜ್ ಅಶೋಕ್ ನಗರ, ಮನೋಜ್ ಶೆಟ್ಟಿ, ರಾಕೇಶ್ ಸಾಲಿಯಾನ್, ಅಮಿತ್ ರಾಜ್, ರಾಮ್ ಎಕ್ಕೂರು, ವಾಝಿ ಪದವಿನಂಗಡಿ, ಅಶ್ರಫ್ ಆಲಿ ಕಾರ್ಕಳ, ದಿನಿಲ್ ಬಲ್ಲಾಳ್ ಭಾಗ್, ಸುರೇಶ್ ಬಲ್ಲಾಳ್ ಭಾಗ್, ರೋಷನ್ ಬಲ್ಲಾಳ್ ಭಾಗ್, ಕಿಶೋರ್ ಬಾಬು ಕೋಡಿಕಲ್, ಪ್ರಾಣೇಶ್ ಬಂಗೇರ, ಕಿರಣ್ ಉರ್ವ, ಯಶ್ವಿನ್ ಪೂಜಾರಿ, ರಕ್ಷಿತ್ ಮೂಲ್ಕಿ ಮತ್ತಿತರು ಉಪಸ್ಥಿತರಿದ್ದರು.