ಕಾಸರಗೋಡು, ಡಿ.01 (DaijiworldNews/PY): ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಎಂದು ಗುರುತಿಸಿಕೊಂಡಿರುವ ಮತಗಟ್ಟೆಗಳನ್ನು ಚುನಾವಣಾ ವೀಕ್ಷಕರು ಪರಿಶೀಲನೆ ನಡೆಸಿದರು.












ವೀಕ್ಷಕ ನರಸಿಂಹ ರೆಡ್ಡಿ, ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಮತಗಟ್ಟೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು . ಮಂಗಳವಾರ ಮಂಜೇಶ್ವರ ತಾಲೂಕು ವ್ಯಾಪ್ತಿಯ ಮತಗಟ್ಟೆಗಳ ತಪಾಸಣೆ ನಡೆಸಿದರು.
ಮಂಗಲ್ಪಾಡಿ ಗ್ರಾಮ ಪಂಚಾಯತ್ನ ಮುಟ್ಟಂ ಶಾಲೆಯಿಂದ ತಪಾಸಣೆ ಆರಂಭಿಸಲಾಯಿತು.
ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿಕಲಚೇತನರಿಗೆ ಮತಚಲಾಯಿಸಲು ಅನುಕೂಲ ಮಾಡುವ ವ್ಯವಸ್ಥೆ ಕಲ್ಪಿಸಲು ಸಲಹೆ ನೀಡಲಾಯಿತು.
ಕಳೆದ ಚುನಾವಣೆಯಲ್ಲಿ ಶೇ.90ಕ್ಕಿಂತ ಅಧಿಕ ಮತದಾನ ನಡೆದು ಓರ್ವ ಅಭ್ಯರ್ಥಿಗೆ ಶೇ.75 ರಷ್ಟು ಮತಗಳು ಲಭಿಸಿದ ಮತಗಟ್ಟೆಗಳು, ಹತ್ತಕ್ಕಿಂತ ಕಡಿಮೆ ಅಂತರದಿಂದ ಗೆದ್ದ ಮತಗಟ್ಟೆಗಳು ಮೊದಲಾದವುಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇದಲ್ಲದೆ ಮತದಾನದ ಸಂದರ್ಭದಲ್ಲಿ ಘರ್ಷಣೆ, ಹಿಂಸೆ ನಡೆದ ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ 84 ಸೂಕ್ಷ್ಮ ಮತಗಟ್ಟೆಗಳಿವೆ. 78 ಗ್ರಾಮ ಪಂಚಾಯತ್, 6 ನಗರಸಭಾ ವ್ಯಾಪ್ತಿಯಲ್ಲಿದೆ. ಈ ಮತಗಟ್ಟೆಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲು, ಸಿಸಿ ಟಿವಿ ಕ್ಯಾಮರಾ ಅಳವಡಿಸಲು ತೀರ್ಮಾನಿಸಲಾಯಿತು.