ಮಂಗಳೂರು, ಡಿ. 01 (DaijiworldNews/SM): ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟೊಂದು ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿದ್ದು, ಘಟನೆಯಲ್ಲಿ ನಾಪತ್ತೆಯಾದ ಆರು ಮೀನುಗಾರರ ಪೈಕಿ ಮೂವರ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.


ಬೊಕ್ಕಪಟ್ಣ ನಿವಾಸಿಗಳಾದ ಪಾಂಡುರಂಗ ಸುವರ್ಣ(58), ಪ್ರೀತಂ(25), ಬೆಂಗ್ರೆ ನಿವಾಸಿ ಚಿಂತನ್(21) ಎಂಬವರ ಮೃತದೇಹ ಪತ್ತೆಯಾಗಿದೆ. ಕಸಬ ಬೆಂಗ್ರೆ ನಿವಾಸಿಗಳಾದ ಮುಹಮ್ಮದ್ ಹಸೈನಾರ್(28), ಮುಹಮ್ಮದ್ ಅನ್ಸಾರ್(32), ಝಿಯಾವುಲ್ಲಾ(36) ಎಂಬವರ ಪತ್ತೆಗೆ ಶೋಧ ಮುಂದುವರೆಸಲಾಗಿದೆ.