ಬಂಟ್ವಾಳ ಜೂನ್ 10: ವಿದ್ಯುತ್ ಪ್ರವಹಿಸಿ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾರೆ. ಪಾಣೆಮಂಗಳೂರು ಗ್ರಾಮದ ಅಕ್ಕರಂಗಡಿ ಎಂಬಲ್ಲಿರುವ ಹಳೇ ಸುಣ್ಣದ ಗೂಡಿನ ಕಟ್ಟಡದಲ್ಲಿ ಭಾನುವಾರ ಮುಂಜಾನೆ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಚಿನ್ನೂರು ತಾಲೂಕು ಗುಂಡ ಗ್ರಾಮದ ಬೊಮ್ಮನ ಹಳ್ಳಿ ನಿವಾಸಿ ಗ್ಯಾನಪ್ಪ (25) ಸಾವನ್ನಪ್ಪಿದವರು. ಕೂಲಿ ಕಾರ್ಮಿಕ ಗ್ಯಾನಪ್ಪ ರಾತ್ರಿ ವೇಳೆ ಊಟ ಮಾಡಿಮಲಗುವ ವೇಳೆ ತಲೆಯ ಮೇಲೆ ಟೇಬಲ್ ಪ್ಯಾನ್ ಹಾಕಿ ಮಲಗಿದ್ದ. ಟೇಬಲ್ ಪ್ಯಾನ್ ಈತನ ತಲೆಯ ಮೇಲೆ ಬಿದ್ದು ಅದರ ಮೂಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ.
ಗ್ಯಾನಪ್ಪ ಅವರಿಗೆ ಹೆಂಡತಿ ಲಕ್ಷ್ಮಮ್ಮ ಹಾಗೂ 9 ತಿಂಗಳಿನ ಓರ್ವ ಪುತ್ರಿ ಇದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.