ಮಂಗಳೂರು, ಡಿ.02 (DaijiworldNews/PY): ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟೊಂದು ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿ ನಾಪತ್ತೆಯಾದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹ ಡಿ.1ರ ಮಂಗಳವಾರ ಪತ್ತೆಯಾಗಿದ್ದು, ಇನ್ನಿಬ್ಬರ ದೇಹ ಇಂದು ಪತ್ತೆಯಾಗಿದೆ.














ಈಗ ಪತ್ತೆಯಾದ ಮೃತದೇಹಗಳ ಪೈಕಿ ಓರ್ವನನ್ನು ಬೆಂಗ್ರೆಯ ಮುಹಮ್ಮದ್ ಅನ್ಸಾರ್ (32), ಎನ್ನಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ತಣ್ಣೀರುಬಾವಿಯಿಂದ ನುರಿತ ಮುಳುಗುತಜ್ಞರು ತಂಡ ಶೋಧ ಕಾರ್ಯ ಮುಂದುವರೆಸಿದೆ.
ಬೊಕ್ಕಪಟ್ಣ ನಿವಾಸಿಗಳಾದ ಪಾಂಡುರಂಗ ಸುವರ್ಣ(58) ಹಾಗೂ ಪ್ರೀತಂ(25) ಅವರ ಮೃತದೇಹ ಡಿ.1ರ ಮಂಗಳವಾರ ಪತ್ತೆಯಾಗಿತ್ತು.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟೊಂದು ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿದ್ದು, ಘಟನೆಯಲ್ಲಿ ನಾಪತ್ತೆಯಾದ ಆರು ಮೀನುಗಾರರ ಪೈಕಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕ ಮಂಗಳೂರು ಉತ್ತರ ಡಾ.ಭಾರತ್ ಶೆಟ್ಟಿ ಮತ್ತು ಇತರರು ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ್ದು, ಬಳಿಕ ಮೃತದೇಹಗಳನ್ನು ಸ್ಥಳಾಂತರಿಸಲಾಯಿತು.