ಕಾಸರಗೋಡು, ಡಿ.02 (DaijiworldNews/MB) : ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಬದಿಯಡ್ಕ ನಿವಾಸಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.

ಬದಿಯಡ್ಕ ಕರಿಂಬಿಲದ ಪ್ರವೀಣ್ ಕುಮಾರ್ ಪ್ರಭು (29) ಮೃತಪಟ್ಟವರು. ಡಿ. 23 ರಂದು ಇವರ ವಿವಾಹ ನಿಗದಿಯಾಗಿತ್ತು.
ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಇಲೆಕ್ಟ್ರಿಕಲ್ ವರ್ಕ್ಸ್ ಸೂಪರ್ ವೈಸರ್ ಆಗಿ ದುಡಿಯುತ್ತಿದ್ದ ಪ್ರವೀಣ್ ಕುಮಾರ್ ಎರಡು ದಿನಗಳ ಹಿಂದೆ ಅಪಘಾತಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ಅವರು ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು.