ಮಂಗಳೂರು, ಸೆ 24: ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು2017ರ ಅವಧಿಯಲ್ಲಿ ಸುಮಾರು54 ಪ್ರಕರಣಗಳು ದಾಖಲಾಗಿದೆ, ಇದು ವಿದ್ಯಾವಂತರ ನಗರ ಎಂದು ಖ್ಯಾತಿ ಪಡೆದ ಮಂಗಳೂರಿನಲ್ಲೇ, ಈ ವಿಚಾರ ಹೊರಬಿದ್ದಿದ್ದು ನಗರದಲ್ಲಿ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ. ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಹಿಳೆಯರ ಮೇಲೆ ನಡಿತಿರುವ ದೌರ್ಜನ್ಯ, ಬಾಲ್ಯವಿವಾಹ, ಬಾಲಕಾರ್ಮಿಕರ ವಿಚಾರ ಕುರಿತಂತೆ ಸಂಬಂದಪಟ್ಟ ಅಧಿಕಾರಿಗಳಿಂದ ಹಾಗೂ ಪೊಲೀಸ್ ರಿಂದ ಮಾಹಿತಿ ಪಡೆದರು. ಇದೇ ವೇಳೆ ಮಂಗಳೂರಿನಲ್ಲಿ ಸುಮಾರು 54 ಪ್ರಕರಣಗಳು ದಾಖಲಾದ ಬಗ್ಗೆ ಮಾಹಿತಿ ಕಲೆ ಹಾಕಿದ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ ಜಿ ಜಗದೀಶ್, ಎಸ್ಪಿ ಸಿ ಎಚ್ ಸುಧೀರ್ ಕುಮಾರ್ ರೆಡ್ದಿ ಮತ್ತಿತರು ಉಪಸ್ಥಿತರಿದ್ದರು.