ಮಂಗಳೂರು, ಡಿ. 03 (DaijiworldNews/SM): ಮೀನುಗಾರಿಕಾ ಬೋಟ್ ದುರಂತದಲ್ಲಿ ಆರು ಮಂದಿ ಮೀನುಗಾರರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಐವರ ಶವ ಪತ್ತೆಯಾಗಿದ್ದು, ಮತ್ತೊರ್ವನ ಪತ್ತೆಗಾಗಿ ಶೋಧ ಮುಂದುವರೆಸಲಾಗಿದೆ. ದುರಂತಕ್ಕೀಡಾಗಿರುವ ಪರ್ಸಿನ್ ಬೋಟ್ ಮೇಲೆತ್ತಲು ಹಾಗೂ ಸಮುದ್ರಪಾಲಾಗಿರುವ ಮತ್ತೋರ್ವನ ಪತ್ತೆಗೆ ಬಾರ್ಜ್ ಹಾಗೂ ಕ್ರೇನ್ ಸ್ಥಳಕ್ಕೆ ತರಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿಗೆ ತಂದಿರುವ ಬಾರ್ಜ್ ಹಾಗೂ ಕ್ರೇನ್ ಸ್ಥಳಕ್ಕೆ ತರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಇನ್ನು ದುರಂತದಲ್ಲಿ ಮುಹಮ್ಮದ್ ಅನ್ಸಾರ್ ಮುಸ್ತಫ ಎಂಬವರು ಇನ್ನೂ ಪತ್ತೆಯಾಗಿಲ್ಲ. ಅವರು ಬೋಟಿನ ಅಡಿಯಲ್ಲಿ ಸಿಲುಕಿರುವ ಬಗ್ಗೆ ಮೀನುಗಾರರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತ್ತೆಗಾಗಿ ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿಗೆ ತಂದಿರುವ ಬಾರ್ಜ್ ಹಾಗೂ ಕ್ರೇನ್ ಅನ್ನು ಸ್ಥಳಕ್ಕೆ ತರಿಸಿಕೊಳ್ಳುವಂತೆ
ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿಗೆ ತಂದಿರುವ ಬಾರ್ಜ್ ಹಾಗೂ ಕ್ರೇನ್ ಅನ್ನು ಸ್ಥಳಕ್ಕೆ ತರಿಸಿ ಬೋಟ್ ಮೇಲಕ್ಕೆತ್ತುವ ಬಗ್ಗೆ ಸಚಿವ ಕೋಟ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಸಚಿವರ ಸೂಚನೆ ಮೇರೆಗೆ ಶೀಘ್ರದಲ್ಲೇ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.